Thursday, September 24, 2026

spot_img

ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯ ಸಂವಹನದ ಪಾಠ

ಉಡುಪಿ : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕ್ಯಾಮೆರಾ ಕೇವಲ ಕ್ಷಣಗಳನ್ನು ಸೆರೆಹಿಡಿಯುವ ಸಾಧನವಲ್ಲ; ಪರಿಣಾಮಕಾರಿ ದೃಶ್ಯ ಸಂವಹನದ ಪ್ರಬಲ ಮಾಧ್ಯಮವೂ ಹೌದು ಎಂದು ಹಿರಿಯ ಸುದ್ದಿ ಛಾಯಾಗ್ರಾಹಕ ಹಾಗೂ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್ ಹೇಳಿದರು. ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ನಗರದ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಸಭಾಂಗಣದಲ್ಲಿ ಸೋಮವಾರ ನಡೆದ ಮೊಬೈಲ್ ಛಾಯಾಗ್ರಹಣದ ಮೂಲಕ ದೃಶ್ಯ ಸಂವಹನ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೊಬೈಲ್ ಛಾಯಾಗ್ರಹಣದ ಮೂಲಕ ಪರಿಣಾಮಕಾರಿ ದೃಶ್ಯ ಸಂವಹನ ನಡೆಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ಒಂದು ಉತ್ತಮ ಛಾಯಾಚಿತ್ರವೇ ಹಲವು ಮಾತುಗಳನ್ನು ಹೇಳಬಲ್ಲದು. ಸುದ್ದಿಯೊಂದನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸರಿಯಾದ ದೃಷ್ಟಿಕೋನ, ಬೆಳಕು, ಸಂಯೋಜನೆ ಹಾಗೂ ಸಂದರ್ಭದ ಅರಿವು ಅತ್ಯಂತ ಮುಖ್ಯ ಎಂದು ತಿಳಿಸಿದರು.

ಛಾಯಾಚಿತ್ರದ ಮಹತ್ವ ಹಾಗೂ ಸುದ್ದಿಯ ಕ್ಷಣಗಳನ್ನು ಸೆರೆಹಿಡಿಯುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತು ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡ ಆಸ್ಟ್ರೋ ಮೋಹನ್, ಮೊಬೈಲ್‌ನಲ್ಲಿರುವ ಕ್ಯಾಮೆರಾ ಸೌಲಭ್ಯಗಳನ್ನು ಸೃಜನಾತ್ಮಕವಾಗಿ ಬಳಸಿಕೊಂಡು ಗುಣಮಟ್ಟದ ದೃಶ್ಯಗಳನ್ನು ರೂಪಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಉಪಸ್ಥಿತರಿದ್ದರು. ಪ್ರಥಮ ಬಿಬಿಎ ವಿದ್ಯಾರ್ಥಿ ವಿಹಾನ್ ಸ್ವಾಗತಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕಮಲಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಭೂಮಿಕಾ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles