Thursday, October 29, 2026

spot_img

ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರದಲ್ಲಿ ನಾಪತ್ತೆ

ಉಡುಪಿ : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಘಟನೆಗಳಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಕೊಡವೂರು ಗ್ರಾಮದ ಮಲ್ಪೆ ಬಂದರಿನಿಂದ ಶ್ರೀವೀರಾಂಜನೇಯ ಪರ್ಸಿಯನ್ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ದ್ವಾರಿಕಾ ಶಿಕಾರ್ (28) ಹಾಗೂ ಓಂ ಶ್ರೀದತ್ತ ಮೀನುಗಾರಿಕಾ ಬೋಟ್‌ನಲ್ಲಿ ತೆರಳಿದ್ದ ಪ್ರಮೋದ್ ಗೌಡ (53) ನಾಪತ್ತೆಯಾದವರು.

ಇಬ್ಬರ ಪತ್ತೆಗಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ (0820-2537999), ಪೊಲೀಸ್ ಉಪನಿರೀಕ್ಷಕರು (9480805447) ಅಥವಾ ಉಡುಪಿ ವೃತ್ತ ನಿರೀಕ್ಷಕರು (9480805430) ಅವರನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles