ಉಡುಪಿ : ಮುಂಬೈನ ವಿಲೇಪರ್ಲೆ ದಕ್ಷಿಣದ 3-ಮಿಸ್ಕಿಟ್ಟಾ ಹೌಸ್ ನಿವಾಸಿ ಪ್ರಸಾದ್ ಸುಂದರ ಶೆಟ್ಟಿ (52) ಎಂಬವರು ನಾಪತ್ತೆಯಾಗಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಬರುತ್ತಿದ್ದರು. ಅದರಂತೆ ಏಪ್ರಿಲ್ 26ರಂದು ಮುಂಬೈನಿಂದ ರೈಲಿನಲ್ಲಿ ಹೊರಟಿದ್ದ ಅವರು, ಏಪ್ರಿಲ್ 27ರಂದು ಉಡುಪಿ ತಲುಪುವ ವೇಳೆ ರೈಲಿನಲ್ಲಿ ಪತ್ತೆಯಾಗದೆ ಕಾಣೆಯಾಗಿರುವುದು ತಿಳಿದುಬಂದಿದೆ.

ನಾಪತ್ತೆಯಾದ ವ್ಯಕ್ತಿಯು ಸುಮಾರು 5 ಅಡಿ 8 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ತುಳು, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ.

ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-2520444, ಉಡುಪಿ ಕಂಟ್ರೋಲ್ ರೂಂ 0820-2526444, ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805408 ಅಥವಾ ಪೊಲೀಸ್ ಉಪನಿರೀಕ್ಷಕರ ಮೊಬೈಲ್ ಸಂಖ್ಯೆ 9080805445 ಅನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.



