Friday, October 2, 2026

spot_img

ಕೊಡವೂರು ಗೋಶಾಲೆಗೆ ಒಂದು ಟೆಂಪೋ ಒಣಹುಲ್ಲಿನ ದಾನ

ಉಡುಪಿ: ಉಡುಪಿ ತಾಲೂಕಿನ ಕೊಡವೂರಿನ ಪೇಜಾವರ ಅಧೋಕ್ಷಜ ಮಠದ ಗೋಶಾಲೆಯಲ್ಲಿರುವ ಗೋವುಗಳ ಮೇವಿಗಾಗಿ ಕುಂಜಾರಗಿರಿಯ ನಂದ ಗಣೇಶ ಅವರು ಒಂದು ಟೆಂಪೋ ಒಣಹುಲ್ಲನ್ನು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.

ಕೊಡವೂರು ಗೋಶಾಲೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ, ಅಪಘಾತಗಳಿಂದ ಗಾಯಗೊಂಡ ಹಾಗೂ ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳಿಗೆ ಆಶ್ರಯ ಕಲ್ಪಿಸಲಾಗುತ್ತಿದೆ. ಇಂತಹ ಗೋವುಗಳ ಪಾಲನೆ, ಪೋಷಣೆ ಹಾಗೂ ಆರೈಕೆಗೆ ಪ್ರತಿದಿನವೂ ಸಾಕಷ್ಟು ಮೇವಿನ ಅಗತ್ಯವಿದೆ. ದಾನಿಗಳ ಸಹಕಾರದಿಂದ ಗೋಶಾಲೆಯ ನಿರ್ವಹಣೆಗೆ ನೆರವಾಗುತ್ತಿದ್ದು, ನಂದ ಗಣೇಶ ಅವರ ಒಣಹುಲ್ಲಿನ ದಾನ ಗೋವುಗಳ ಆಹಾರದ ವ್ಯವಸ್ಥೆಗೆ ಸಹಕಾರಿಯಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles