Tuesday, August 11, 2026

spot_img

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ತುಪ್ಪದ ಅಪ್ಪ ಸೇವೆ ಸಂಪನ್ನ

ಉಡುಪಿ : ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಷಾಢ ಮಾಸದ ಸಂಪ್ರದಾಯದಂತೆ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಅತ್ಯಂತ ಪ್ರಿಯವಾದ ವಿಶೇಷ ತುಪ್ಪದ ಅಪ್ಪ ಸೇವೆ ಸೋಮವಾರ ಅಪರಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವತಿಯಿಂದ ಪ್ರತಿವರ್ಷ ಆಷಾಢ ಮಾಸದಲ್ಲಿ ಈ ವಿಶೇಷ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸೋಮವಾರ ನಡೆದ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೇವಿಯ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ನಾಡೋಜ ಡಾ. ಜಿ. ಶಂಕರ್, ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ್ ಸುವರ್ಣ ಮೂಳೂರು, ಶರಣ್ ಕುಮಾರ್ ಮಟ್ಟು, ರತ್ನಾಕರ್ ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ವಾಸುದೇವ ಸಾಲ್ಯಾನ್ ಕಟಪಾಡಿ, ವಿನಯ್ ಕರ್ಕೇರ ಮಲ್ಪೆ, ಗುಂಡು ಬಿ. ಅಮೀನ್ ಕಿದಿಯೂರು, ಹರಿಯಪ್ಪ ಆರ್. ಕೋಟ್ಯಾನ್ ಮಲ್ಪೆ, ಸುಧಾಕರ್ ಕುಂದರ್ ಬಂಕೆರ್ ಕಟ್ಟ, ರವೀಶ್ ಎಸ್. ಕೊರವಾಡಿ, ಕರುಣಾಕರ್ ಸಾಲ್ಯಾನ್ ಮಲ್ಪೆ, ದಿನೇಶ್ ಎರ್ಮಾಳ್, ವಿಠಲ್ ಕರ್ಕೇರ ಬೆಳ್ಳಂಪಳ್ಳಿ, ಸತೀಶ್ ಸಾಲ್ಯಾನ್ ಎರ್ಮಾಳ್, ಸುಂದರ್ ಸಾಲ್ಯಾನ್ ಮಲ್ಪೆ, ಶಿವರಾಮ ಕೋಟ, ಶಿವಪ್ಪ ಟಿ. ಕಾಂಚನ್ ಮಲ್ಪೆ, ರಾಜೇಂದ್ರ ಸುವರ್ಣ ಹಿರಿಯಡ್ಕ, ಸುಧಾಕರ ಸುವರ್ಣ ಎರ್ಮಾಳ್, ಮನೋಜ್ ಕಾಂಚನ್ ಎರ್ಮಾಳ್, ಸುಗುಣ ಎಸ್. ಕರ್ಕೇರ, ಪೂರ್ಣಿಮಾ ಚಂದ್ರಶೇಖರ, ಭರತ್ ಎರ್ಮಾಳ್ ಹಾಗೂ ಮೋಹನ್ ಬಂಗೇರ ಕಾಪು ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles