Thursday, March 5, 2026

spot_img

ವಿಜೃಂಭಣೆ ನಡೆದ ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಮಹೋತ್ಸವ..

ಉಡುಪಿ : ಇತಿಹಾಸ ಪ್ರಸಿದ್ಧ ತಗ್ಗರ್ಸೆ ಸಾಂಪ್ರದಾಯಕ ಹೆಗ್ಡೆ ಮನೆತನದ ಅನುವಂಶೀಯ ಸಂಪ್ರದಾಯವಾಗಿ ನಡೆಯುವ ಕಂಬಳ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಈ ಬಾರಿ ಕಂಬಳಿಗೆ ಆಧುನಿಕ ಸ್ಪರ್ಶವಾಗಿ ಸೆನ್ಸಾರ್ ತಂತ್ರಜ್ಞಾನದ ಮೂಲಕ ಕೋಣಗಳ ಓಟದ ವೇಗ ಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗಿತ್ತು. ಕಂಬಳಕ್ಕೆ ಆಗಮಿಸಿದ ಪ್ರತಿಯೊಬ್ಬ ಕೋಣದ ಮಾಲೀಕರು ತಮ್ಮ ಕೋಣಗಳನ್ನು ಸಿಂಗರಿಸಿ, ತಲೆಗೆ ಅಲಂಕಾರಿಕ ಹಿಂಗಾರ ಕೊನೆ ಕಟ್ಟಿ, ವಾದ್ಯ ಘೋಷದ ನಡುವೆ ದೇವರ ಹೆಸರನ್ನು ಕೂಗಿ ಕಂಬಳಗದ್ದೆಗೆ ಇಳಿಸಿದರು. ನಂತರ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ ನೀರು ಕುಡಿಸಿ ಓಟಕ್ಕೆ ಸಜ್ಜುಗೊಳಿಸಲಾಯಿತು.

ವಿಶೇಷವಾಗು ಕಂಬಳಕ್ಕೆ ಬರುವ ಕೋಣಗಳನ್ನು ವೇದಿಕೆಗೆ ತರುವಾಗ ವೀಳ್ಯ, ತೆಂಗಿನಕಾಯಿ, ಕಬ್ಬು ಮುಂತಾದ ಗೌರವ ವಸ್ತುಗಳು ಹಾಗೂ ಮಾಲೀಕರಿಗೆ ಶಾಲು ಹೊದಿಸಿ ಮಾನ್ಯತೆ ನೀಡಲಾಯಿತು.

ತಗ್ಗರ್ಸೆ ಹೆಗ್ಡೆ ಮನೆತನದ ವಿಶೇಷ ಕೋಣಗಳಿಗೆ ದೈವ-ದೇವತೆಗಳ ಪೂಜೆ ಸಲ್ಲಿಸಿ, ಹುಟ್ಟಿನ ಮನೆಯ ಕೋಣವನ್ನು ಮೆರವಣಿಗೆಯೊಂದಿಗೆ ಗದ್ದೆಗೆ ತರುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಂತರ ಹೆಗ್ಡೆ ಮನೆಯ ನಾಲ್ಕು ಜೊಡೆ ಕೋಣಗಳು ಗದ್ದೆಯಲ್ಲಿ ಓಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದವು.

ಈ ಬಾರಿ ಒಟ್ಟು 60 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದು, ವಿಜೇತ ಕೋಣಗಳಿಗೆ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ, ತಗ್ಗರ್ಸೆ ಅವರಿಂದ ನಗದು ಬಹುಮಾನ ಮತ್ತು ಶಾಶ್ವತ ಫಲಕಗಳನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಂಠದಮನೆ ಟಿ. ನಾರಾಯಣ್ ಹೆಗ್ಡೆ, ಕಂಠದಮನೆ ಕೆ. ಬಾಬು ಹೆಗ್ಡೆ, ತಗ್ಗರ್ಸೆ ಹೆಗ್ಡೆ ಕುಟುಂಬದವರು, ಕಂಬಳ ಅಭಿಮಾನಿಗಳು ಹಾಗೂ ತಗ್ಗರ್ಸೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles