ಉಡುಪಿ : ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಗ್ರಾಮದ ಕಲ್ಲಗದ್ದೆ ಬಳಿ ನಡೆದಿದೆ. ಸಚಿನ್ ಕಲ್ಲಪ್ಪ ಸಂಕ್ರಟ್ಟಿ (28) ಮೃತಪಟ್ಟ ಸವಾರ.

ಸಚಿನ್ ಅವರು ಶಂಕರನಾರಾಯಣ ಪದವಿ ಕಾಲೇಜಿನಲ್ಲಿ ನಡೆದಿದ್ದ ಹುಟ್ಟೂರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸ್ನೇಹಿತ ಬಸವ ಕಿರಣರನ್ನು ಬಸ್ಸಿಗೆ ಬಿಡಲು ಕುಂದಾಪುರದ ದಿಕ್ಕಿಗೆ ಅಂಪಾರು ಮಾರ್ಗವಾಗಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಸಚಿನ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ, ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



