ಉಡುಪಿ : ಗಾಜುಗಳಿಗೆ ಕಡುಗಪ್ಪು ಬಣ್ಣದ ಟಿಂಟ್ ಅಳವಡಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸ್ ರು ಶಿವಳ್ಳಿ ಗ್ರಾಮದ ಬಳಿ ವಶಕ್ಕೆ ಪಡೆದ ಘಟನೆ ನಡೆದಿದೆ.

ಕೇರಳದ ಕಣ್ಣೂರು ನಿವಾಸಿ ಶೋಹೈಲ್ ನೀಲಾಕತ್ (26) ಪೊಲೀಸ್ ವಶದಲ್ಲಿರುವ ಚಾಲಕ. ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12ABH59440 ನೇ ಆಕಾಶ ನೀಲಿ ಬಣ್ಣದ ಕಾರನ್ನುಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು, ಕರ್ಕಶ ಶಬ್ಧ ಮಾಡಿಕೊಂಡು ಹೋಗುತ್ತಿದ್ದ ಕಾರನ್ನು ಮಣಿಪಾಲ ಪೊಲೀಸರು ಹಿಂಬಾಲಿಸಿಕೊಂಡು ಹೋಗಿ ಎಂಐಟಿ ಸರ್ಕಲ್ ಬಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಚಾಲಕ ಶೋಹೈಲ್ ನೀಲಾಕತ್ ನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.


