Monday, March 2, 2026

spot_img

ಗರಿಷ್ಠ ಅಂಕ ಪಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ

ಕುಂದಾಪುರ : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕುಂದಾಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರ ಶೈಕ್ಷಣಿಕ ವಲಯದಲ್ಲಿ ಗರಿಷ್ಠ ಅಂಕ ಪಡೆದ ಸರಕಾರಿ ಶಾಲೆಯ ಐದು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವನ್ನು ನಿಮ್ಮ ಶೈಕ್ಷಣಿಕ ವ್ಯವಸ್ಥೆ ಸದುಪಯೋಗಿಸಿಕೊಂಡು ಒಂದು ಉಪಕರಣದಿಂದ ನಿಮ್ಮ ಮುಂದಿನ ವ್ಯಾಸಂಗದಲಿ ಅತಿ ಹೆಚ್ಚಿನ ಅಂಕಗಳು ಪಡೆದು ಕುಂದಾಪುರಕ್ಕೆ ಕೀರ್ತಿಯನ್ನು ತರುವಂತಾಗಲಿ. ಸರಕಾರದಿಂದ ಶಿಕ್ಷಣಕ್ಕಾಗಿ ಬೇರೆಬೇರೆ ಸವಲತ್ತುಗಳು ದೊರೆಯುತ್ತಿರುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಲಕ್ಷ್ಮಿ ಪ್ರಸ್ತಾವಿಕ ಮಾತುಗಳು ಮೂಲಕ ವಿದ್ಯಾರ್ಥಿಗಳಿಗೆ ಶುಭ ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಮಕ್ಕಳ ಪೋಷಕರು ಉಪಸಿದ್ಧರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles