Saturday, June 28, 2025

spot_img

ವ್ಯಾಲೆಟೈಂನ್‌ ಡೇ ರಾತ್ರಿ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ ದಾಖಲು

ಮಣಿಪಾಲ : ವ್ಯಾಲೆಟೈಂನ್‌ ಡೇ ರಾತ್ರಿ ಮಣಿಪಾಲದಲ್ಲಿ ನಡೆದ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕುರಿತು ಪೋಲಿಸರಿಂದಲೇ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾತ್ರಿಯ ಬೀಟ್ ಕರ್ತವ್ಯದಲ್ಲಿ ಇದ್ದಾಗ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಗಲಾಟೆ ನಡೆದ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ 8 ರಿಂದ 10 ಜನ ಸೇರಿದ್ದು ಓರ್ವ ವ್ಯಕ್ತಿಯನ್ನು ಓಡಾಡಿಸಿಕೊಂಡು ಕೈಯಿಂದ ಹಲ್ಲೆ ಮಾಡಿರುವುದು ಗಮನಕ್ಕೆ ಬಂದಿದೆ . ಆತನ ಶರ್ಟನ್ನು ಎಳೆದಾಡುತ್ತಿದ್ದರು ,ಹಿಂದಿ ಭಾಷೆಯಲ್ಲಿ ಬೈದಾಡಿಕೊಳ್ಳುತ್ತಿದ್ದರು ಸ್ಥಳಕ್ಕೆ ತೆರಳಿ ಗಲಾಟೆಯನ್ನು ತಪ್ಪಿಸಿ ಗಾಯಾಳುಗೆ ಆಸ್ಪತ್ರೆಗೆ ಹೋಗಲು ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಗಲಾಟೆಯ ಕಾರಣಕ್ಕೆ ಕಲಂ 189(2 )191) 126 (2 )115 (2) 352 ನಂತೆ ಪ್ರಕರಣ ದಾಖಲಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles