Friday, June 27, 2025

spot_img

ವಂಡಾರಿನ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಸಹಿತ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ : ಕುಂದಾಪುರ ವಂಡಾರಿನ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಸಹಿತ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಹಾಲಿಟ್ಟು ಸೇವೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಆದಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.


ಶೃಂಗೇರಿ ಶಾರದಾ ಪೀಠದ ದಕ್ಷಿಣ ಪ್ರಾಂತೀಯ ಧರ್ಮಾಧಿಕಾರಿ ವೇದ ಮೂರ್ತಿ ನಾಗಪಾತ್ರಿಗಳಾದ ಲೋಕೇಶ್ ಅಡಿಗ ಬಡಾಕೆರೆ ಅವರು ನಾಗದರ್ಶನ ಸೇವೆಯನ್ನು ನೆರವೇರಿಸಿದರು. ಅಂಪಾರು ಸರ್ವೋತ್ತಮ ವೈದ್ಯರು ಮತ್ತು ಬಳಗದವರಿಂದ ಮಂಡಲ ಸೇವೆ ಜರುಗಿತು.ಅಸಂಖ್ಯಾ ಭಕ್ತರು ಮಂಡಲ ಸೇವೆಯನ್ನು ಕಣ್ತುಂಬಿ ಕೊಂಡರು.

ಹೂ ಹಣ್ಣು ಹಂಪಲುಗಳಿಂದ ಮಂಡಲದ ಚಪ್ಪರವನ್ನು ಸಿಂಗಾರ ಮಾಡಲಾಗಿತ್ತು. ವೈದಿಕರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವಭಾವಿ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆ,ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು‌.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles