ಉಡುಪಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಿಜಲ್ ಮೇಸ್ವಾನಿ ಹಾಗೂ ಅವರ ಕುಟುಂಬಸ್ಥರು ಗುರುವಾರ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಪರ್ಯಾಯ ಶ್ರೀ ಶೀರೂರು ಮಠಕ್ಕೆ ಆಗಮಿಸಿದ ಬಿಜಲ್ ಮೇಸ್ವಾನಿ ಹಾಗೂ ಕುಟುಂಬದವರು ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸ್ಥಳೀಯ ಅಧಿಕಾರಿಗಳಾದ ಧನಂಜಯ ಆರ್., ವಿಪಿನ್ ಸಪ್ರೆ, ಶಿವನಂದನ ಹಾಗೂ ಮಾಧವ ಶಾನುಭಾಗ್ ಉಪಸ್ಥಿತರಿದ್ದರು.

ಕುಟುಂಬ ಸಮೇತರಾಗಿ ಶ್ರೀಕೃಷ್ಣನ ದರ್ಶನ ಪಡೆದ ಬಿಜಲ್ ಮೇಸ್ವಾನಿ ಅವರು ಮಠದ ಧಾರ್ಮಿಕ ಪರಂಪರೆ ಹಾಗೂ ವಿಶೇಷ ಪೂಜಾ ವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು.


