Friday, October 9, 2026

spot_img

ಶತಮಾನದ ಕಂಡ ಸಾಹಿತ್ಯ ವಿಜ್ಞಾನಿ ಕಾರಂತರು: ಡಾ. ಗಣೇಶ್ ಅಮೀನ್ ಸಂಕಮಾರ್

ಉಡುಪಿ: ಕಾರಂತರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಯಾವುದೇ ವಿಚಾರವನ್ನು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಗಮನಿಸುವ ಅವರ ಪ್ರವೃತ್ತಿ, ವಿಚಾರಗಳ ಕುರಿತಾದ ಮುಂದಾಲೋಚನೆ ನಮ್ಮನ್ನು ಬೆರಗುಗೊಳಿಸುತ್ತದೆ. ಈ ದೃಷ್ಟಿಯಿಂದ ಶಿವರಾಮ ಕಾರಂತರನ್ನು ಕಳೆದ ಶತಮಾನದ ಸಾಹಿತ್ಯ ವಿಜ್ಞಾನಿ ಎಂದು ಕರೆಯಬಹುದು ಎಂದು ಖ್ಯಾತ ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯಪಟ್ಟರು.

ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿವರಾಮ ಕಾರಂತರ 124ನೇ ಜನ್ಮದಿನಾಚರಣೆ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರಂತರೊಂದಿಗಿನ ಒಡನಾಟದ ಕುರಿತು ಮಾತನಾಡಿದ ಚಿಂತಕ ಸಂಕಯ್ಯ ಶೆಟ್ಟಿ, ಕಾರಂತರು ಕೋಪಿಷ್ಠರು ಎಂಬ ತಪ್ಪು ಕಲ್ಪನೆ ಇದೆ. ಆದರೆ ಅವರ ಕೋಪ ಸಾತ್ವಿಕವಾಗಿತ್ತು. ಆ ಸಿಟ್ಟಿನೊಳಗೆ ಮಗುವಿನ ಮುಗ್ಧತೆ ಮತ್ತು ತಾಯಿಯ ಪ್ರೀತಿ ಅಡಗಿತ್ತು ಎಂದು ಸ್ಮರಿಸಿದರು.

ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಮಾತನಾಡಿ, ಕಾರಂತರ ಬರಹಗಳಲ್ಲಿರುವ ವಿವಿಧ ವೈಚಾರಿಕ ಆಯಾಮಗಳನ್ನು ವಿವರಿಸಿದರು. ರೇಡಿಯೊ ಮಣಿಪಾಲದ ಮೂಲಕ ಕಾರಂತರ ಕುರಿತಾದ ವಿವಿಧ ಲೇಖಕರ ವಿಚಾರಗಳು ‘ಕಾರಂತಯಾನ’ ಹೆಸರಿನಲ್ಲಿ 35 ಕಂತುಗಳಲ್ಲಿ ಪ್ರಸಾರವಾಗಿವೆ ಎಂದು ಸಹಾಯಕ ಪ್ರಾಧ್ಯಾಪಕಿ ಹಾಗೂ ರೇಡಿಯೊ ಮಣಿಪಾಲದ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ವಹಿಸಿದ್ದರು. ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಟ್ರಸ್ಟ್‌ನ ಸದಸ್ಯರಾದ ಆತಾಡಿ ಅಮೃತ ಶೆಟ್ಟಿ, ಡಾ. ಭಾರತಿ ಮರಾವಂತೆ, ಸಂತೋಷ್ ನಾಯಕ್ ಪಟ್ಲ, ಜಿ.ಎಂ. ಶರೀಫ್ ಹೂಡೆ ಹಾಗೂ ಡಾ. ಪ್ರಸಾದ್ ರಾವ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯ ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿದರು. ಸತೀಶ್ ಕೊಡವೂರು ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles