Saturday, November 7, 2026

spot_img

ರಬ್ಬರ್ ತೋಟದಲ್ಲಿ ಮಧ್ಯರಾತ್ರಿ ಗಲಾಟೆ: ಕೃಷಿಕನಿಗೆ ಮಾರಕಾಸ್ತ್ರದಿಂದ ಹಲ್ಲೆ

ಉಡುಪಿ: ರಬ್ಬರ್ ತೋಟಕ್ಕೆ ಮಧ್ಯರಾತ್ರಿ ಅಕ್ರಮ ಪ್ರವೇಶಿಸಿ ರಬ್ಬರ್ ಕಳವುಗೆ ಯತ್ನಿಸಿದ ವಿಚಾರವಾಗಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯಲ್ಲಿ ವ್ಯಕ್ತಿಯ ಗಲ್ಲಕ್ಕೆ ರಕ್ತಗಾಯವಾಗಿದ್ದು, ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎನ್ನಲಾಗಿದೆ. ಚಿಕ್ಕಮಗಳೂರು ನಿವಾಸಿ ಜಾನಿ (58) ನೀಡಿದ ದೂರಿನಂತೆ, ಅವರ ತಮ್ಮ ಸಂತೋಷ ಅವರು ಘಟನಾ ಸ್ಥಳದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ನ. 5ರಂದು ರಾತ್ರಿ 11.30ರಿಂದ 12 ಗಂಟೆಯ ನಡುವಿನ ಅವಧಿಯಲ್ಲಿ ನಡೆದ ಘಟನೆ ಕುರಿತು ಸಂತೋಷ ಅವರು ಜಾನಿಗೆ ಮಾಹಿತಿ ನೀಡಿದ್ದಾರೆ.

ಸಂತೋಷ ಅವರ ತೋಟದ ಪಕ್ಕದಲ್ಲಿರುವ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಜಯನ್, ಮುರುಳಿ ಹಾಗೂ ತೋಟದ ಮಾಲೀಕ ಮ್ಯಾಥ್ಯೂಸ್ ಮತ್ತು ಅವರ ಮಗ ಬಿಬಿನ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯವಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಅಜಯನ್ ಮತ್ತು ಮುರುಳಿ ಅವರು ಮಧ್ಯರಾತ್ರಿ ಸಂತೋಷ ಅವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ರಬ್ಬರ್ ಕಳವು ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ಸಂತೋಷ ಅವರ ತೋಟದ ಕೆಲಸಗಾರರಾದ ಸುರೇಶ್ ಹಾಗೂ ಇತರರೊಂದಿಗೆ ಆರೋಪಿತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿತರು ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಕೆಲಸಗಾರ ಸುರೇಶ್ ದೂರವಾಣಿ ಮೂಲಕ ಸಂತೋಷ ಅವರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದರು.

ಅದೇ ಸಮಯದಲ್ಲಿ ಅಜಯನ್ ಮತ್ತು ಮುರುಳಿ ಅವರು ಚಾಕು ಹಾಗೂ ರಾಡ್ ಹಿಡಿದುಕೊಂಡು ತೋಟದ ಮಾಲೀಕ ಮ್ಯಾಥ್ಯೂಸ್ ಮತ್ತು ಅವರ ಮಗ ಬಿಬಿನ್ ಅವರಿಗೆ ಮಾಹಿತಿ ನೀಡಿದ್ದು, ಅವರೂ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಸಂತೋಷ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಕುತ್ತಿಗೆಗೆ ಬೀಸಿದ ಆಯುಧ ಆಯತಪ್ಪಿ ಗಲ್ಲಕ್ಕೆ ತಾಗಿ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣಕಾಸಿನ ವ್ಯವಹಾರವೇ ಈ ಸಂಘರ್ಷಕ್ಕೆ ಮೂಲ ಕಾರಣ ಎಂದು ಜಾನಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles