Monday, September 21, 2026

spot_img

ಮೀನು ವ್ಯವಹಾರದ ಹಣ ಸ್ವಂತ ಖಾತೆಗೆ ವರ್ಗಾವಣೆ ಆರೋಪ: 10.11 ಲಕ್ಷ ವಂಚನೆ ಪ್ರಕರಣ ದಾಖಲು

ಉಡುಪಿ: ಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಪಾವತಿಯಾಗಬೇಕಿದ್ದ ಹಣವನ್ನು ಸ್ವಂತ ಬ್ಯಾಂಕ್‌ ಖಾತೆಗೆ ಜಮಾ ಮಾಡಿಕೊಂಡು ಉದ್ಯೋಗಿಯೊಬ್ಬರು ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದ ಮೇಲೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲದ ಪ್ರಗತಿ ನಗರದ ಜೋನ್ಸನ್‌ ಅವರು ಮಲ್ಪೆಯಲ್ಲಿ ರೆಹಬೊತ್‌ ಸೀಫುಡ್‌ ಹೆಸರಿನಲ್ಲಿ ಮೀನು ವ್ಯವಹಾರ ನಡೆಸುತ್ತಿದ್ದು, ಮಲ್ಪೆ ಬಂದರಿನಿಂದ ಮೀನು ಖರೀದಿಸಿ ತಮಿಳುನಾಡಿನ ವಿವಿಧ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಅವರ ಬಳಿ ಕೆಲಸ ಮಾಡುತ್ತಿದ್ದ ವಿನು ವಿ.ಎಸ್‌. ಎಂಬಾತ ಮೀನು ಖರೀದಿ–ಮಾರಾಟ, ಗ್ರಾಹಕರೊಂದಿಗೆ ಸಂಪರ್ಕ ಹಾಗೂ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

2025ರ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ತಮಿಳುನಾಡಿನ ಕೋಟೈಪಟ್ಟಿನಂನಲ್ಲಿರುವ ಜೆ.ಆರ್‌.ಜೆ. ಫುಡ್ಸ್‌ ಇಂಡಿಯಾ ಪ್ರೈ.ಲಿ. ಸಂಸ್ಥೆಗೆ 16 ಲಕ್ಷ ರೂ.ಗೂ ಅಧಿಕ ಮೌಲ್ಯದ ಮೀನು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯಿಂದ ಜೋನ್ಸನ್‌ ಅವರಿಗೆ ಪಾವತಿಯಾಗಬೇಕಿದ್ದ ಹಣದಲ್ಲಿ 10,11,450 ರೂ. ಹಣವನ್ನು ಆರೋಪಿ ತನ್ನ ವೈಯಕ್ತಿಕ ಬ್ಯಾಂಕ್‌ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಆರೋಪಿ ಪರಾರಿಯಾಗಿದ್ದು, ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ಖಾಸಗಿ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles