ಉಡುಪಿ: ನಗರದ ವಿದ್ಯಾರತ್ನ ನಗರದ ಡಿ.ಸಿ. ಕಚೇರಿ ರಸ್ತೆಯಲ್ಲಿರುವ ಡಿಆರ್ಎನ್ಕೆಲ್ಯಾಬ್ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಸೇವನೆ ನಡೆಯುತ್ತಿರುವ ಖಚಿತ ಸಾರ್ವಜನಿಕ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ, ಹುಕ್ಕಾ ಸೇವಿಸುತ್ತಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆದು, ಕೆಫೆಯ ವ್ಯವಸ್ಥಾಪಕನ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 6ರಂದು ಠಾಣೆಯ ಎಎಸ್ಐ ವಾಮನ ಅವರ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ಗಳಾದ ಸುರೇಶ್ ಶೆಟ್ಟಿ, ಚೇತನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರವಿರಾಜ್ ಮತ್ತು ಉಮೇಶ್ ಅವರ ತಂಡ ಕೆಫೆಗೆ ದಾಳಿ ನಡೆಸಿತು. ಈ ವೇಳೆ ಕೆಫೆಯೊಳಗೆ ಎಂಟು ಮಂದಿ ಟೇಬಲ್ ಮೇಲೆ ಹುಕ್ಕಾ ಶೀಸೆಗಳನ್ನು ಇಟ್ಟುಕೊಂಡು ಹುಕ್ಕಾ ಸೇವಿಸುತ್ತಿರುವುದು ಕಂಡುಬಂದಿದೆ.

ಪೊಲೀಸರು ವಶಕ್ಕೆ ಪಡೆದವರಲ್ಲಿ ಕುಂದಾಪುರದ ಎಸ್. ರೀಯಾಜ್, ಬೈಂದೂರಿನ ಜೀಶಾನ್ ಅಬ್ದುಲ್ ಜಾಹೀರ್, ಗಂಗೊಳ್ಳಿಯ ಮೊಹಮ್ಮದ್ ಸಮೀರ್, ಉಡುಪಿಯ ಮಹಮ್ಮದ್ ಸವಾದ್, ಕೃಷ್ಣ, ಚಿರಾಗ್, ಕಾಪುವಿನ ತಾರನಾಥ್ ಹಾಗೂ ಉಡುಪಿಯ ಅನ್ವೀತ್ ಸೇರಿದ್ದಾರೆ.

ಬಳಿಕ ಕೆಫೆಯ ವ್ಯವಸ್ಥಾಪಕ ಹಾಗೂ ಕ್ಯಾಷಿಯರ್ ಆಗಿರುವ ಬಂಟ್ವಾಳ ತಾಲೂಕಿನ ಮಣ್ಣೂರು ಗ್ರಾಮದ ಮೊಹಮ್ಮದ್ ಶಫಾನ್ (22) ಅವರನ್ನು ವಶಕ್ಕೆ ಪಡೆದು ಮಹಜರು ನಡೆಸಲಾಗಿದೆ. ಪೊಲೀಸರ ವರದಿ ಆಧರಿಸಿ ಕೆಫೆಯ ವ್ಯವಸ್ಥಾಪಕ ಹಾಗೂ ಹುಕ್ಕಾ ಸೇವಿಸುತ್ತಿದ್ದ ಎಂಟು ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೋಟ್ಪಾಕಾಯ್ದೆಯಡಿಪ್ರಕರಣದಾಖಲಿಸಿಕೊಂಡುತನಿಖೆಮುಂದುವರಿಸಲಾಗಿದೆ.



