ಉಡುಪಿ: ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದರೆ, ಮಂಗಳೂರಿನ ಎಸ್ಡಿಎಂ ಕಾಲೇಜು ಮೂರನೇ ಹಾಗೂ ಉಡುಪಿಯ ಪಿಪಿಸಿ ಕಾಲೇಜು ನಾಲ್ಕನೇ ಸ್ಥಾನ ಗಳಿಸಿವೆ.

ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಪ್ರಥಮ್ ಪೂಜಾರಿ ಅವರು ಪ್ರತಿಷ್ಠಿತ ಮಿಸ್ಟರ್ ಮಂಗಳೂರು ಯುನಿವರ್ಸಿಟಿ ಪ್ರಶಸ್ತಿಗೆ ಭಾಜನರಾದರು. ಮೋಸ್ಟ್ ಮಸ್ಕ್ಯುಲರ್ ಮ್ಯಾನ್ ವಿಶೇಷ ಪ್ರಶಸ್ತಿಯನ್ನು ಆಕಾಶ್ ಹಳೆಯಂಗಡಿ ತಮ್ಮದಾಗಿಸಿಕೊಂಡರು.

ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯ, ಸ್ನಾಯುಗಳ ಬೆಳವಣಿಗೆ ಹಾಗೂ ಮೈಕಟ್ಟು ಪ್ರದರ್ಶನದ ಮೂಲಕ ಗಮನ ಸೆಳೆದರು.


