Monday, March 2, 2026

spot_img

ಉಡುಪಿಯಲ್ಲಿ ವಿಚಿತ್ರ ಘಟನೆ: ಕತ್ತರಿಸಿದ ಬಂಗುಡೆ ಮೀನು ಮತ್ತೆ ಜೀವಂತ!

ಉಡುಪಿ : ಕರಾವಳಿಯಲ್ಲಿ ಸಾಮಾನ್ಯವಾಗಿ ಕತ್ತರಿಸಿದ ಮೀನು ನೇರವಾಗಿ ಸಾರು ಅಥವಾ ಫ್ರೈಗೆ ಹೋಗುತ್ತದೆ. ಆದರೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದ ಘಟನೆ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಗ್ರಾಹಕರೊಬ್ಬರು ಮಲ್ಪೆ ಬಂದರಿನಲ್ಲಿ ಮೀನು ಮಾರಾಟ ಮಹಿಳೆಯಿಂದ ಬಂಗುಡೆ ಮೀನು ಖರೀದಿಸಿ, ಅಲ್ಲಿಯೇ ಕತ್ತರಿಸಿ ಕೊಡಲು ಕೇಳಿಕೊಂಡಿದ್ದರು. ಈ ವೇಳೆ ಮೀನು ಕತ್ತರಿಸಿ ತಬ್‌ಗೆ ಹಾಕಿದ ನಂತರವೂ ಅದು ಜೀವಂತವಾಗಿ ಅಲುಗಾಡಲು ಆರಂಭಿಸಿದೆ.

ಈ ವಿಚಿತ್ರ ದೃಶ್ಯವನ್ನು ಕಂಡು ಮೀನು ಮಾರಾಟ ಮಹಿಳೆಯರು ಹಾಗೂ ಗ್ರಾಹಕರು ಹೌಹಾರಿದ್ದು, ಕತ್ತರಿಸಿದ ಬಳಿಕವೂ ಜೀವಂತವಾಗಿದ್ದ ಮೀನಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles