Friday, November 27, 2026

spot_img

ಮಣಿಪಾಲದ ಶಾಂಭವಿ ಪ್ಯಾಲೇಸ್‌ನಲ್ಲಿ ಲ್ಯಾಪ್‌ಟಾಪ್‌, ಮೊಬೈಲ್ ಕಳವು

ಉಡುಪಿ : ಪರೀಕ್ಷೆಗಾಗಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬರ ಕೊಠಡಿಯಿಂದ ಲ್ಯಾಪ್‌ಟಾಪ್‌, ಮೊಬೈಲ್ ಸೇರಿದಂತೆ ವಸ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರದ ಶಾಂಭವಿ ಪ್ಯಾಲೇಸ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ 20 ವರ್ಷದ ಸಾಗ್ನಿಕ್ ಬಸು ಅವರು ಮಣಿಪಾಲದ ಎಂಐಟಿ ವಿದ್ಯಾರ್ಥಿಯಾಗಿದ್ದು, ಶಾಂಭವಿ ಪ್ಯಾಲೇಸ್‌ನ 604ಎ ಕೊಠಡಿಯಲ್ಲಿ ವಾಸವಾಗಿದ್ದಾರೆ. ನ.24ರಂದು ಬೆಳಗಿನ ಜಾವ 4.30ರ ಸುಮಾರಿಗೆ ಪರೀಕ್ಷೆ ಸಂಬಂಧ ಓದು ಮುಗಿಸಿ, ಕೊಠಡಿಯ ಬಾಗಿಲು ಹಾಕದೆ ಮಲಗಿದ್ದರು. ಬೆಳಿಗ್ಗೆ 7.30ಕ್ಕೆ ಎದ್ದು ನೋಡಿದಾಗ ಕೊಠಡಿಯ ಬಾಗಿಲು ತೆರೆದಿದ್ದು, ಒಳಗಿದ್ದ ವಸ್ತುಗಳು ನಾಪತ್ತೆಯಾಗಿದ್ದವು.

ಕಳವಾದ ವಸ್ತುಗಳಲ್ಲಿ ಒಂದು ಲಕ್ಷ ರೂ. ಮೌಲ್ಯದ ನೀಲಿ ಬಣ್ಣದ ಎಚ್‌ಪಿ ವಿಕ್ಟಸ್ ಲ್ಯಾಪ್‌ಟಾಪ್‌, 30 ಸಾವಿರ ರೂ. ಮೌಲ್ಯದ ಕಪ್ಪು ಬಣ್ಣದ ಒನ್‌ಪ್ಲಸ್ 11ಆರ್ ಮೊಬೈಲ್‌, ವೈಲ್ಡ್‌ಕ್ರಾಫ್ಟ್ ಬ್ಯಾಗ್ ಹಾಗೂ ಪರ್ಸ್‌ನಲ್ಲಿದ್ದ ಕೆಲವು ದಾಖಲೆಗಳು ಸೇರಿವೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles