Friday, May 29, 2026

spot_img

ಯಕ್ಷಗಾನ ಕಲಾರಂಗದ 97ನೇ ಮನೆ ಹಸ್ತಾಂತರ..

ಉಡುಪಿ : ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ಉಡುಪಿ ಅಂಬಲಪಾಡಿಯ ಶ್ರೀಮತಿ ಮೀರಾ ರಾಮಮೂರ್ತಿ ಭಟ್ಟ ಮತ್ತು ಕುಟುಂಬಸ್ಥರು, ದಿ. ರಾಮಮೂರ್ತಿ ಭಟ್ಟ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿ ನಿರ್ಮಿಸಿರುವ ಮನೆ ರಾಮಮೂರ್ತಿ ಯನ್ನು ಅಮಾಸೆಬೈಲಿನ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಾನ್ವಿತ ಅವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೀರಾ ರಾಮಮೂರ್ತಿ ಭಟ್ಟ ಅವರು, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ಕೀರ್ತನೆಯನ್ನು ಉಲ್ಲೇಖಿಸಿ, ಭಗವಂತ ನೀಡಿದ್ದರಲ್ಲಿ ಒಂದಷ್ಟು ದಾನ ಮಾಡುವ ಅವಕಾಶ ಸಿಕ್ಕಿದೆ ಎಂದರು. ಯಕ್ಷಗಾನ ಕಲಾರಂಗದವರು ಸಮಾಜಪರ ಕಳಕಳಿಯಿಂದ ಬಡ ಕುಟುಂಬಕ್ಕೆ ಸುಂದರ ಮನೆ ನಿರ್ಮಿಸಿ ಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಾವುದೇ ಆಡಂಬರ ಅಥವಾ ಪ್ರಚಾರದ ಅಪೇಕ್ಷೆ ಇಲ್ಲದೆ ಯಕ್ಷಗಾನ ಕಲಾರಂಗ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವುದು ಮಾದರಿಯಾಗಿದೆ ಎಂದರು.

ರಾಮಮೂರ್ತಿ ಭಟ್ಟ ಅವರ ಮಕ್ಕಳಾದ ಮನು ಭಾರದ್ವಾಜ್ ಹಾಗೂ ಡಾ. ಪೂರ್ಣಶ್ರೀ ಮಾತನಾಡಿ, ಯಕ್ಷಗಾನ ಕಲಾರಂಗದ ಸಮಾಜಪರ ಸೇವಾ ಕಾರ್ಯಗಳನ್ನು ಸಮೀಪದಿಂದ ನೋಡುವ ಅವಕಾಶ ಲಭಿಸಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ಗೀತಾ ಎಚ್‌ಎಸ್‌ಎನ್ ಫೌಂಡೇಶನ್ ಅಧ್ಯಕ್ಷ ಎ. ಶಂಕರ ಐತಾಳ್, ಶಿಕ್ಷಣಪ್ರೇಮಿ ಸಖಾರಾಮ್ ಸೋಮಯಾಜಿ, ಸಹನಾ ಭಾರದ್ವಾಜ್, ಮೂಕಾಂಬಿಕಾ ವಾರಂಬಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ನಿರಂಜನ ಬಲ್ಲಾಳ್, ಲಲಿತಾ ಬಲ್ಲಾಳ್, ಯಶೋದಾ ನಾಗೇಶನ್, ಶ್ಯಾಮಲಾ ಪ್ರಸಾದ್, ದೇವಕಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಯು. ವಿಶ್ವನಾಥ ಶೆಣೈ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಡಾ. ರಾಜೇಶ್ ನಾವುಡ, ಹಿರಿಯಣ್ಣ ಕಿದಿಯೂರು, ಕೆ. ಅಜಿತ್ ಕುಮಾರ್, ಡಾ. ಪ್ರತಿಮಾ ಜೆ. ಆಚಾರ್ಯ, ಜಯರಾಮ ಪಡಿಯಾರ್, ವಿನೋದಾ ಎಂ., ಡಾ. ಶ್ರೀಕಾಂತ್ ಸಿದ್ಧಾಪುರ, ವಿಶ್ವನಾಥ ಶೆಟ್ಟಿ ಹಾಗೂ ಕೃಷ್ಣ ಪೂಜಾರಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles