ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದೃಢಕಾಯ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏಪ್ರಿಲ್ 5ರ ರಾತ್ರಿ ಸಂಭವಿಸಿದ್ದು, ಸ್ಥಳೀಯರ ಚುರುಕಿನ ಕಾರ್ಯದಿಂದ ಅವನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಲ ಮೂಲದ ಬಸವನಗೌಡ (35) ಜೀವನದ ಬೇಸರದಿಂದ ಆತ್ಮಹತ್ಯೆಗೆ ಮುಂದಾಗಿದ್ದಾತ ಎಂದು ತಿಳಿದುಬಂದಿದೆ.

ರಾತ್ರಿ ವೇಳೆ ನದಿಗೆ ಹಾರಲು ಯತ್ನಿಸಿದಾಗ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ತಕ್ಷಣ ಧಾವಿಸಿ ಯುವಕನನ್ನು ರಕ್ಷಿಸಿದರು. ರಕ್ಷಣಾ ಕಾರ್ಯದಲ್ಲಿ ಲಕ್ಷ್ಮಿಕಾಂತ ಭಟ್ ಹಾಗೂ ಶ್ರೀನಿವಾಸ್ ರಾವ್ ಸಹಕರಿಸಿದರು. ನಂತರ ಯುವಕನನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಯುವಕನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಉಡುಪಿಗೆ ಬರುವುದಾಗಿ ತಿಳಿಸಿದ್ದಾರೆ. ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ.



