ಉಡುಪಿ : ಉಡುಪಿಯಲ್ಲಿ ನಡೆದ ಪ್ರವಾಸಿ ದೋಣಿ ದುರಂತ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ. ಮೈಸೂರಿನ ಉದಯಗಿರಿ ಜಲಾಪುರಿ ನಿವಾಸಿ ದಿಶಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ.

ಈ ಮೊದಲು ಅಪಘಾತದಲ್ಲಿ ಸಿಂಧು ಹಾಗೂ ಶಂಕರಪ್ಪ ಮೃತಪಟ್ಟಿದ್ದು, ಇದೀಗ ದಿಶಾ ಕೊನೆಯುಸಿರು ಎಳೆದಿದ್ದಾರೆ. ಧರ್ಮರಾಜ್ ಎಂಬ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೈಸೂರಿನ ಬಿಪಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದ 28 ಮಂದಿ ಸಹೋದ್ಯೋಗಿಗಳು ಡೆಲ್ಟಾ ಬೀಚ್‌ನಿಂದ ಎರಡು ಪ್ರತ್ಯೇಕ ಪ್ರವಾಸಿ ದೋಣಿಗಳಲ್ಲಿ ತಲಾ 14 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಒಂದು ದೋಣಿ ಮುಗುಚಿ ಸಮುದ್ರಪಾಲಾಗಿದ್ದು, ಅದರಲ್ಲಿ ಇದ್ದ 14 ಮಂದಿ ಅಪಘಾತಕ್ಕೆ ಒಳಗಾಗಿದ್ದರು.

ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ



