Wednesday, March 4, 2026

spot_img

ಬ್ರಹ್ಮಾವರ ಪೊಲೀಸರಿಂದ ಟಿಪ್ಪರ್ ಚಾಲಕ–ಮಾಲಕರ ಸಭೆ..

ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣೆ ವತಿಯಿಂದ ಬ್ರಹ್ಮಾವರ ತಾಲೂಕಿನ ಟಿಪ್ಪರ್ ಚಾಲಕರು ಹಾಗೂ ಮಾಲಕರ ಸಭೆಯನ್ನು ಶುಕ್ರವಾರ ಬ್ರಹ್ಮಾವರ ನಾರಾಯಣ ಗುರು ಕಲಾ ಮಂದಿರದಲ್ಲಿ ಆಯೋಜಿಸಲಾಯಿತು.

ಸಭೆಯಲ್ಲಿ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಾಬಾಗಿ ಮಾತನಾಡಿ, ಎಲ್ಲ ಟಿಪ್ಪರ್ ವಾಹನಗಳಲ್ಲಿ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕು ಎಂದು ಸೂಚಿಸಿದರು.

ಜೊತೆಗೆ ವಾಹನಗಳ ಪೀಟ್ನೆಸ್ ಸರ್ಟಿಫಿಕೇಟ್ ಹಾಗೂ ವಿಮೆ ಕಡ್ಡಾಯವಾಗಿರಬೇಕು ಎಂದು ತಿಳಿಸಿ, ವಾಹನಗಳನ್ನು ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬಳಸಬಾರದೆಂದು ಎಚ್ಚರಿಸಿದರು.

ಸಭೆಯಲ್ಲಿ ಟಿಪ್ಪರ್ ಮಾಲಕ–ಚಾಲಕರ ಸಂಘದ ಅಧ್ಯಕ್ಷ ಮಹೇಶ ಮೊಯಿಲಿ, ಕಾರ್ಯದರ್ಶಿ ನಯನ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles