Wednesday, March 4, 2026

spot_img

ನಾಗರಹಾವು ಕಡಿದು ತೋಟ ಕಾಯುವ ಕಾರ್ಮಿಕನ ಸಾವು..

ಉಡುಪಿ : ಕುತ್ಯಾರು ಗ್ರಾಮದ ತೋಟವೊಂದರಲ್ಲಿ ಕಳೆದ ಆರು ವರ್ಷಗಳಿಂದ ಖಾಯಂ ಆಗಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ ಕಿಟ್ಟು ಪೂಜಾರಿ (54) ಅವರು ನಾಗರಹಾವು ಕಡಿತಕ್ಕೆ ಬಲಿಯಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

 ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ತೋಟದಲ್ಲಿನ ಅಡಿಕೆ ಮರಗಳಿಗೆ ಮದ್ದು ಸಿಂಪಡಿಸಲು ಹೋಗಿದ್ದಾಗ ಸುರೇಂದ್ರ ಕಿಟ್ಟು ಪೂಜಾರಿ ಅವರಿಗೆ ಹಾವು ಕಡಿದಿದ್ದು, ತಕ್ಷಣವೇ ಅವರನ್ನು ಕಿನ್ನಿಗೋಳಿ ಆಸ್ಪತ್ರೆಗೆ ಕರೆಸೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ದಾರಿಯಲ್ಲೇ ಪ್ರಾಣ ಕಳೆದುಕೊಂಡಿರುವುದು ವೈದ್ಯರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಈ ಕುರಿತಾಗಿ ಮೃತರ ಪುತ್ರ ಕಿರಣ್ ಎಸ್. ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles