ಕುಂದಾಪುರ : ಕುಂದಾಪುರ ತಾಲ್ಲೂಕಿನ ವಡೇರಹೋಬಳಿಯ ಪಿ.ವಿ.ಎಸ್. ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಗೆ ಅಭಿವೃದ್ಧಿ ಕಾರ್ಯಗಳ ನೆರವಿಗಾಗಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ್ ಮೊಗವೀರ ರವರು 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.


ಈ ಮೊತ್ತವನ್ನು ಶಾಲೆಯ ಮೇಲ್ಛಾವಣಿ ದುರಸ್ತಿ ಹಾಗೂ ಶಾಲಾ ದತ್ತಿನಿಧಿಗೆ ಬಳಸಿಕೊಳ್ಳಲು ಹಸ್ತಾಂತರಿಸಲಾಗಿದೆ. ಶಾಲಾ ಅಭಿವೃದ್ಧಿಗೆ ಅನುವಾಗುವ ಈ ಸಹಾಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.



