Wednesday, March 4, 2026

spot_img

ರಾಷ್ಟ್ರೀಯ ಹೆದ್ದಾರಿ–66 ಮೇಲ್ದರ್ಜೆಗೇರಿಸಲು ಯೋಜನಾ ವರದಿಗೆ ಅನುಮೋದನೆ..

ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಹೆಚ್ಚುತ್ತಿರುವ ಅಪಘಾತಗಳ ಹಿನ್ನೆಲೆ ಹಾಗೂ ಬಾಕಿ ಉಳಿದಿರುವ ಸರ್ವಿಸ್‌ ರಸ್ತೆಗಳ ನಿರ್ಮಾಣ, ಪ್ರಮುಖ ಜಂಕ್ಷನ್‌ಗಳ ಸುಧಾರಣೆಗಾಗಿ ವಿವರವಾದ ಯೋಜನಾ ವರದಿ ತಯಾರಿಸಲು ಹೆದ್ದಾರಿ ಇಲಾಖೆ ಅಧಿಕೃತ ಅನುಮೋದನೆ ನೀಡಿದೆ.

ಸುರತ್ಕಲ್‌ನಿಂದ ಕುಂದಾಪುರವರೆಗಿನ ಮಾರ್ಗಕ್ಕೆ ಸಂಬಂಧಿಸಿದಂತೆ ದೀರ್ಘಾವಧಿ ಅಭಿವೃದ್ಧಿ ಯೋಜನೆ ರೂಪಿಸಲು ಧ್ರುವ ಕನ್ಸಲ್ಟೆನ್ಸಿ ಮತ್ತು ಮಾರ್ಕ್ ಸಿವಿಲ್ ಇಂಜಿನಿಯರ್ ಸರ್ವಿಸ್ ಲಿಮಿಟೆಡ್ ಎನ್ನುವ ಎರಡು ಏಜನ್ಸಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಈ ಏಜೆನ್ಸಿಗಳು ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಡಿ.ಪಿ.ಆರ್ ತಯಾರಿಸಲಿದೆ.

ಮುಖ್ಯವಾಗಿ ಮುಲ್ಕಿ, ಪಡುಬಿದ್ರೆ, ಬ್ರಹ್ಮಾವರ ಪೇಟೆ, ಕೋಟ ತಿರುವು, ತೆಕ್ಕಟ್ಟೆ ಸೇರಿ ಅಪಘಾತ ಪ್ರವಣ ಪ್ರದೇಶಗಳಲ್ಲಿ ಫ್ಲೈಓವರ್‌ಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡುವ ಯೋಜನೆ ಇದೆ. ಈ ಡಿ.ಪಿ.ಆರ್ ಅನುಮೋದನೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಅನುಗುಣವಾಗಿ ಮಾಡಲಾಗಿದೆ ಎಂದು ಹೆದ್ದಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles