ಉಡುಪಿ: ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಮಹೋತ್ಸವಕ್ಕೆ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿಶಿಷ್ಟ ರೀತಿಯ ಸ್ವಾಗತ ಮಲ್ಪೆ ಸಮುದ್ರತೀರದಲ್ಲಿ ಸಿದ್ಧಗೊಂಡಿದೆ.

ಬುಧವಾರ ಮಲ್ಪೆ ಬೀಚ್ನಲ್ಲಿ ಪ್ರದರ್ಶನಗೊಂಡ ಮರಳು ಶಿಲ್ಪ ಪ್ರವಾಸಿಗರು ಹಾಗೂ ಸ್ಥಳೀಯರ ಗಮನ ಸೆಳೆದಿದ್ದು, ಹಲವರು ಶಿಲ್ಪದ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡರು.


ಈ ಕಲಾತ್ಮಕ ಸ್ವಾಗತ ಶಿಲ್ಪವನ್ನು ಉಡುಪಿ ಸ್ಯಾಂಡ್ ಥೀಮ್ ತಂಡದ ಕಲಾವಿದರಾದ ಹರೀಶ್ ಸಾಗ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಇವರಿಂದ ರಚಿಸಲಾಗಿದೆ. ಸಮುದ್ರತೀರದ ನಿರ್ಮಿಸಲಾದ ಈ ಸುಂದರ ಮರಳು ಶಿಲ್ಪ, ಪ್ರಧಾನಿ ಮೋದಿ ಉಡುಪಿ ಆಗಮನದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದೆ.



