Tuesday, March 3, 2026

spot_img

ಸಂಸದ ಕೋಟ ನಾಡ್ಪಾಲು ಗ್ರಾಮ ಪಂಚಾಯಿತಿಗೆ ಭೇಟಿ ಬಿ.ಎಸ್.ಎನ್.ಎಲ್ ಟವರ್ ಬಗ್ಗೆ ಚರ್ಚೆ

ಉಡುಪಿ: ಹೆಬ್ರಿ ತಾಲ್ಲೂಕಿನ, ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಗುಂಬೆ, ಕಾಸನಮಕ್ಕಿ ಇನ್ನಿತರ ಬಿ.ಎಸ್.ಎನ್.ಎಲ್ ಟವರ್‌ಗಳಲ್ಲಿ ನೆಟ್‌ವರ್ಕ್ನ ಸಮಸ್ಯೆ ಇರುವುದರಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಖುದ್ದು ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ನಾಡ್ಪಾಲು ಗ್ರಾಮ ಪಂಚಾಯಿತಿಗೆ ಭೇಟಿಕೊಟ್ಟು ನೆಟ್ವರ್ಕ್ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರು.

 ಆಗುಂಬೆಯ ಟವರ್‌ನಲ್ಲಿ ಸಕಾಲದಲ್ಲಿ ನೆಟ್ವರ್ಕ್ ಸಿಗದೇ ಇರುವುದು ಮತ್ತು ಬ್ಯಾಟರಿ ಹಾಗೂ ಸೋಲಾರ್ ಅಳವಡಿಕೆ ಆಗದಿರುವುದರ ಸಮಸ್ಯೆಯಿಂದಾಗಿ ನೆಟ್ವರ್ಕ್ ಸಿಗದೆ ಗ್ರಾಮ ಪಂಚಾಯತ್‌ನ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿರುವುದು ನಾಡ್ಪಾಲು ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಹಾಗೂ ಸದಸ್ಯರು ಸಂಸದರ ಗಮನಕ್ಕೆ ತಂದರು. ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸನಮಕ್ಕಿಯಲ್ಲಿ ನೂತನ ಟವರ್ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಸಹಮತಿ ಸಿಗದೇ ಇರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪಂಚಾಯತ್ ಸದಸ್ಯರು ಸರ್ಕಾರದ ಗಮನಕ್ಕೆ ತಂದರು.

 ತಕ್ಷಣ ದೂರವಾಣಿ ಮೂಲಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ ಕೋಟ ಇನ್ನೊಂದು ವಾರದಲ್ಲಿ ಟವರ್ ಬದಲಾವಣೆಗೆ ಅನುಮತಿ ನೀಡಬೇಕೆಂದು ಸಲಹೆ ಇತ್ತರು. ಆಗುಂಬೆ ಟವರ್‌ನ ಬ್ಯಾಟರಿ ಮತ್ತು ಸೋಲಾರ್ ಅಳವಡಿಸಲು ಸೂಚನೆ ನೀಡಿದ ಕೋಟ, ಆಗುಂಬೆಯ ಪ್ರಥಮ ತಿರುವಿನ ಬಳಿ ಅಥವಾ ನಾಡ್ಪಾಲು ಗ್ರಾಮ ಪಂಚಾಯತ್‌ನ ಸನಿಹದಲ್ಲಿ ನೂತನ ಟವರ್ ಅಳವಡಿಕೆಗೆ ಪ್ರಸ್ತಾಪ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸಲಹೆ ಇತ್ತರು. ನಾಡ್ಪಾಲು ಪ್ರದೇಶ ತೀರ ಹಿಂದುಳಿದ ಗ್ರಾಮವಾಗಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿ ಹೊಸ ಟವರ್‌ಗಳ ಮಂಜೂರಾತಿಗೆ ಸಭೆಯಲ್ಲಿ ಲಭ್ಯವಿದ್ದ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಸಂಸದ ಕೋಟ ಸೂಚಿಸಿದರು.

ಬಿ.ಎಸ್.ಎನ್.ಎಲ್‌ನ ಪ್ರಗತಿಯ ಕುರಿತಾದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆಗಿರುವ ದಿನೇಶ್ ಹೆಗ್ಡೆ ಹಾಗೂ ಗ್ರಾಮ ಪಂಚಾಯಿತಿನ ಇತರೆ ಸದಸ್ಯರು, ಗ್ರಾಮಸ್ಥರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದು ಅಭಿಪ್ರಾಯಗಳನ್ನು ತಿಳಿಸಿದರು. ಬಿ.ಎಸ್.ಎನ್.ಎಲ್ ಅಧಿಕಾರಿಗಳಾದ ಉಡುಪಿ ಎ.ಜಿ.ಎಮ್ ಹರಿಕುಮಾರ್, ಜೆ.ಟಿ.ಓ ಕೃಷ್ಣ ಹಾಜರಿದ್ದರು. ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್ ರವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles