Monday, March 2, 2026

spot_img

1972ರ ಗ್ರಾಚ್ಯುಟಿ ಮೊತ್ತವನ್ನು ಕೊಡುವಂತೆ ಉಡುಪಿಯಲ್ಲಿ ಮುಖ್ಯಮಂತ್ರಿ ಯವರಿಗೆ ಮನವಿ

ಉಡುಪಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ 2011 ರಿಂದ 2023 ಮಾರ್ಚ್ ತನಕ ನಿವ್ರತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೂ ಮತ್ತು ಸಹಾಯಕಿಯರಿಗೂ ಸುಪ್ರೀಂ ಕೋರ್ಟ್ ಆದೇಶದಂತೆ 1972ರ ಗ್ರಾಚ್ಯುಟಿ ಮೊತ್ತವನ್ನು ಕೊಡುವಂತೆ ಉಡುಪಿಯಲ್ಲಿ ಸಿ.ಡಿ.ಪಿ.ಒ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

 ಬುಧವಾರದಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರ ಗಳಲ್ಲಿ ಸಿ.ಡಿ.ಪಿ.ಒ ಮೂಲಕ ಮುಖ್ಯಮಂತ್ರಿ ಯವರಿಗೆ ಅಂಗನವಾಡಿ ನೌಕರರ ಸಂಘ ಮನವಿ ನೀಡಲಾಯಿತು. ನಿಯೋಗದಲ್ಲಿ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಭಾರತಿ.ಎಸ್, ನಿವ್ರತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತರಾದ ಶಾಂತ, ವಂಸತಿ, ಬೇಬಿ, ಪ್ರೇಮ, ದೇವಕಿ, ವಿನೋದ, ಪ್ರಭಾವತಿ, ಸರಸ್ವತಿ, ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles