Thursday, March 5, 2026

spot_img

ನನ್ನ ಪತ್ನಿ ನಿಮಗಾಗಿ ಕೊಡವೂರು ಮನೆಯಲ್ಲಿ ಕಾಯುತ್ತಿದ್ದಾಳೆ ಎಂದು ಹನಿಟ್ರ್ಯಾಪ್‌ ಮಾಡಿ ರೌಡಿ ಶೀಟರ್‌ ಸೈಫುದ್ದೀನ್‌ ಹತ್ಯೆ: ಪ್ರಕರಣದ ತನಿಖೆಯ ವೇಳೆ ಬಹಿರಂಗ

ಉಡುಪಿ : ಮಲ್ಪೆ ಕೊಡವೂರಿನಲ್ಲಿ ಹತ್ಯೆಯಾದ ರೌಡಿ ಶೀಟರ್‌ ಎಕೆಎಂಎಸ್‌ ಬಸ್‌ ಮಾಲೀಕ ಸೈಫುದ್ದೀನ್‌ ಕೊಲೆ ಹತ್ಯೆಗೆ ಏನು ಕಾರಣ ಎನ್ನುವ ಪ್ರಶ್ನೆಗೆ ಉತ್ತರಗಳು ಒಂದೊಂದಾಗಿ ಹೊರಬೀಳುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಆರೋಪಿ ಫೈಜಲ್‌ ಎನ್ನುವಾತನ ಪತ್ನಿ ರಿಧಾ ಶಬಾನ ಳನ್ನು ಮಲ್ಪೆ ಪೊಲೀಸ್‌ ರು ವಶಕ್ಕೆ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಅನೇಕ ಊಹಾಪೂಹ ಗಳಿಗೆ ಕಾರಣವಾಗಿತ್ತು. ಈ ಕುರಿತು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣ ಕುರಿತು ಮಾಹಿತಿ ನೀಡಿದರು.

ಸೆಪ್ಟೆಂಬರ್‌ 27 ರಂದು ಬೆಳಿಗ್ಗೆ ಸೈಫುದ್ದೀನ್‌ ಆಪ್ತ, ಆರೋಪಿ ಫೈಜಲ್‌ ಖಾನ್‌ ಮಣಿಪಾಲದ ಕಾಯಿನ್‌ ಸರ್ಕಲ್‌ ಬಳಿ ಇರುವ ಸೈಯಿಪುದ್ದಿನ್‌ ಮನೆಗೆ ಬಂದು ಬಸ್ಸಿನ ವ್ಯವಹಾರದ ಕುರಿತು  ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿ ಮಲ್ಪೆಯ ಕೊಡವೂರಿನಲ್ಲಿರುವ ಎರಡನೇಯ ಮನೆಯಲ್ಲಿ ಫೈಜಲ್‌ ಖಾನ್‌, ಶರೀಫ್‌ ಇತರರೊಂದಿಗೆ ಸೇರಿಕೊಂಡು ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಬಳಿಕ ಆರೋಪಿಗಳು ತಾವು ಬಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೈಫುದ್ದೀನ್‌ ಪುತ್ರ ಅಬ್ದುಲ್‌ ಅಂಜಿಲ್‌ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಪೊಲೀಸ್‌ ರುಮಹಮದ್‌ ಫೈಸಲ್‌ ಖಾನ್‌ (27), ಮೊಹಮದ್‌ ಶರೀಫ್‌ (37), ಅಬ್ದುಲ್‌ ಶುಕುರ್‌ (43) ಎನ್ನುವ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಫೈಜಲ್‌ ಖಾನ್‌ ತನ್ನ ಪತ್ನಿ ಮೇಲೆ ಸೈಫುದ್ದೀನ್‌ ಕಣ್ಣು ಹಾಕಿದ ಹಿನ್ನಲೆಯಲ್ಲಿ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತಿಳಿಸಿದ್ದ.

 ಬಳಿಕ ಫೈಜಲ್‌ ಖಾನ್‌ ಪತ್ನಿ ರಿಧಾ ಶಭಾನ(27) ಎನ್ನುವವರನ್ನು ಪೊಲೀಸ್‌ರು ಬಂಧಿಸಿ ತನಿಖೆ ಮುಂದುವರಿಸಿದಾಗ, ರಿಧಾ ಮತ್ತು ಸೈಫುದ್ದೀನ್‌ ಕಳೆದ ಒಂದು ವರ್ಷದಿಂದ ಸಲುಗೆಯಿಂದ ಇರುವುದು ಕಾಲ್‌ ರೆಕಾರ್ಡ್‌ ಮತ್ತು ಮೊಬೈಲ್‌ ಮೆಸೇಜ್‌ ಮೂಲಕ ಪತ್ತೆಯಾಗಿದೆ. ಈ ಕುರಿತು ರಿಧಾ ಶಬಾನಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ, ಸೆಪ್ಟೆಂಬರ್‌ ೨೭ ರಂದು ಪತಿ ಪೈಜಲ್‌ ಖಾನ್‌ ಪ್ಲಾನ್‌ ನಂತೆ ಸೈಫುದ್ದೀನ್‌ ಗೆ ನಾನು ಕೊಡವೂರು ಮನೆಯಲ್ಲಿ ಕಾಯುತ್ತಿರುವುದಾಗಿ ತಿಳಿಸಿರುವುದಾಗಿ ರಿಧಾ ಒಪ್ಪಿಕೊಂಡಿದ್ದಾಳೆ. ಸೈಫುದ್ದೀನ್‌ ಕೊಲೆ ಕುರಿತು ನಡೆದ ಪ್ಲಾನ್‌ ನಲ್ಲಿ ಮೂವರು ಆರೋಪಿಗಳ ಜೊತೆ ರಿಧಾ ಶಬಾನ ಭಾಗಿಯಾಗಿದ್ದಾಳೆ ಎನ್ನುವುದು ತನಿಖೆಯ ಮೇಲೆ ತಿಳಿದು ಬಂದಿದೆ.

ಇನ್ನು ಕೊಲೆಯಾದ ದಿನ ಮುಂಜಾನೆ ಆರೋಪಿ ಫೈಜಲ್‌ ಖಾನ್‌, ತನ್ನ ಪತ್ನಿ ರಿಧಾ ಶಬಾನ ನಿಮಗಾಗಿ ಕೊಡವೂರು ಮನೆಯಲ್ಲಿ ಕಾಯುತ್ತಿರುವುದಾಗಿ ಸೈಫುದ್ದೀನ್‌ ಗೆ ತಿಳಿಸಿದ್ದಾನೆ, ಸೈಫುದ್ದೀನ್‌ ತಕ್ಷಣ ರಿಧಾ ಶಭಾನಳಿಗೆ ಕರೆ ಮಾಡಿ ಖಚಿತ ಪಡಿಸಿಕೊಂಡು ಬಳಿಕ ಫೈಜಲ್‌ ಖಾನ್‌ ಜೊತೆ ಕೊಡವೂರು ಮನೆಗೆ ಹೋದಾಗ, ಅಲ್ಲಿ ಮೊದಲೇ ಅಡಗಿ ಕುಳಿತ್ತಿದ್ದ ಉಳಿದ ಆರೋಪಿಗಳಾದ ಮೊಹಮದ್‌ ಶರೀಫ್‌ , ಅಬ್ದುಲ್‌ ಶುಕುರ್‌ ಜೊತೆ ಫೈಜಲ್‌ ಸೇರಿಕೊಂಡು ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ಕಂಡು ಬಂದಿದೆ. ವೈಯಕ್ತಿಕ ದ್ವೇಷ, ಹಣಹಾಸು ವ್ಯವಹಾರ ಜೊತೆ ಇನ್ನು ಕೆಲವು ವಿಚಾರಗಳು ಈ ಪ್ರಕರಣದಲ್ಲಿರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಪೊಲೀಸ್‌ ರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಇದೇ ಪ್ರಕರಣದ ಕುರಿತು ಈ ಆರೋಪಿಗಳಿಗೆ ಬಾಹ್ಯವಾಗಿ ಯಾರಾದರೂ ನೆರವು ನೀಡರಬಹುದು ಎನ್ನುವ ದಿಕ್ಕಿನಲ್ಲಿ ಪೊಲೀಸ್‌ ರು ತನಿಖೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles