ಉಡುಪಿ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು, ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಹಾಗೂ ವಿದ್ಯೆಗೆ ಜಾತಿ, ಮತಗಳ ಭೇದವಿಲ್ಲ ಎಂದು ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನದ ಇಂದು.

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನದ ಅಂಗವಾಗಿ ಬಾರ್ಕೂರಿನ ಕಲಾವಿದೆ ವಿಶಾಲ ಮಹೇಶ್ ಪೂಜಾರಿ ರಂಗೋಲಿಯಲ್ಲಿ ಶ್ರೀಗಳ ಚಿತ್ರ ಮೂಡಿಸಿ ಗಮನಸೆಳೆದಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಸತತ ಪರಿಶ್ರಮದಿಂದ ಐದು ಅಡಿ ಉದ್ದ ನಾಲ್ಕು ಅಡಿ ಅಗಲದ ರಂಗೋಲಿಯ ಕಲಾ ಕೃತಿಯನ್ನು ಬಾರ್ಕೂರಿನ ಶಿವಗಿರಿ ಕ್ಷೇತ್ರದ ನಾರಾಯಣ ಗುರು ಮಂದಿರದಲ್ಲಿ ರಚಿಸಿದ್ದಾರೆ. ಗುರು ಜಯಂತಿಯ ಪ್ರಯುಕ್ತ, ಕಲಾ ಆಸಕ್ತರು ಹಾಗೂ ಗುರು ಭಕ್ತರು ಮತ್ತು ಸಾರ್ವಜನಿಕರಿಗೆ ವೀಕ್ಷಿಸಬಹುದಾಗಿದೆ.



