ಕುಂದಾಪುರ : ಕ್ಯಾಟರಿಂಗ್ ಶೆಡ್ ನಲ್ಲಿ ಇಸೀಟ್ ಜುಗಾರಿ ಆಟವಾಡುತ್ತಾ ಇದ್ದ 11 ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ರು ಬಂಧಿಸಿದ ಘಟನೆ ನಡೆದಿದೆ. ಚಂದ್ರಶೇಖರ(52), ಅಭಿಜಿತ್(33), ಸತೀಶ್ ಪೂಜಾರಿ(34), ಗಣಪತಿ ವೀರಪ್ಪ ನಾಯ್ಕ್,( 34), ಈಶ್ವರ ಹೊನ್ನಪ್ಪ ನಾಯ್ಕ್, (53), ಸುಬ್ಬಣ್ಣ(57), ಭಾಸ್ಕರ ಬೈರಪ್ಪ ನಾಯ್ಕ್, ( 38), ಮಂಜುನಾಥ, ( 58), ಸುರೇಶ ವೀರಪ್ಪ ನಾಯ್ಕ್, ( 42), ವಿಜಯ, ( 45 ) ನಿತೇಶ್ (26) ಬಂಧಿತರು.

ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಮುಕ್ಕೋಡು ರಾಜೀವ ಶೆಟ್ಟಿ ಎಂಬವರ ಕ್ಯಾಟರಿಂಗ್ ಶೆಡ್ ನಲ್ಲಿ ಇಸ್ಲೀಟ್ ಆಟವಾಡುತ್ತಿದ್ದಾಗ ಪೊಲೀಸ್ ರು ಧಾಳಿ ಮಾಡಿದಾಗ, ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1,10,790 ರೂಪಾಯಿ, ಮೂವರು ಕಾರು ಸೇರಿದಂತೆ ಉಳಿದ ವಸ್ತುಗಳನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


