Wednesday, March 4, 2026

spot_img

ಪತಿಗೆ ಶಿಕ್ಷೆ ಪ್ರಕಟ ಹಿನ್ನಲೆ ಪತ್ನಿ ಮಗು ಆತ್ಮಹತ್ಯೆಗೆ ಶರಣು

ಬ್ರಹ್ಮಾವರ : ಪತಿಗೆ ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೆ ಪತ್ನಿ ಮತ್ತು ಮಗು ಆತ್ಮಹತ್ಯೆಗೆ ಶರಣಾದ ಘಟನೆ ಬ್ರಹ್ಮಾವರದ ಬಳಿ ನಡೆದಿದೆ, ತಾಯಿ ಸುಷ್ಮೀತಾ (35) ಹಾಗೂ ಒಂದೂವರೆ ವರ್ಷದ ಮಗು ಶ್ರೇಷ್ಠ ಆತ್ಮಹತ್ಯೆ ಮಾಡಿಕೊಂಡವರು.

 ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ಮನೆಯ ಸೀಲಿಂಗ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮಗುವಿನ ಮೃತದೇಹ ಪತ್ತೆಯಾಗಿತ್ತು.

ಮೃತದೇಹದ ಬಳಿ ತಮ್ಮ ಸಾವಿಗೇ ನಾವೇ ಕಾರಣ ಎನ್ನುವ ಪತ್ರವೂ ಕೂಡ ದೊರೆತಿದೆ. ೨೦೦೯ರಲ್ಲಿ ಸುಶ್ಮಿತಾ ಅವರ ಪತಿ ಹಾಗೂ ಮನೆಯವರ ಮೇಲೆ 307 ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು.

ಈ ಹಿನ್ನಲೆಯಲ್ಲಿ ಸುಶ್ಮೀತಾ ಅವರ ಪತಿ ಹೈಕೋರ್ಟ್‌ ಕಾರ್ಯಕ್ಕಾಗಿ ಪತಿ ಬೆಂಗಳೂರು ತೆರಳಿದ್ದರು, ಹೈಕೋರ್ಟ್‌ ನಲ್ಲಿ ಪತಿ ಮತ್ತು ಮನೆಯವರಿಗೆ ಶಿಕ್ಷೆಗೆ ಘೋಷಣೆಯಾದ ಹಿನ್ನಲೆಯಲ್ಲಿ ಸುಶ್ಮೀತಾ ಅವರು ಮೊದಲು ಮಗು ಶ್ರೇಷ್ಠ ಗೆ ನೇಣು ಹಾಕಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles