Monday, March 2, 2026

spot_img

ಮಡಾಮಕ್ಕಿ ಹಂಜ ರಸ್ತೆ ಅಭಿವೃದ್ಧಿಪಡಿಸಲು ಅಡ್ಡಿಯಾಗುತ್ತಿದ್ದು ಅರಣ್ಯ ಇಲಾಖೆಯ ಅನುಮತಿಗೆ ಶಾಸಕ ಎ.ಕಿರಣ್ ಕೊಡ್ಗಿ ಮುನ್ನುಡಿ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ಹಂಜಾ ರಸ್ತೆಯು ಅರಣ್ಯ ಇಲಾಖೆಯ ಅನುಮತಿ.ಇಲ್ಲದೆ ಅಭಿವೃದ್ಧಿ ಪಡಿಸಲು ತೊಡಕು ಉಂಟಾಗಿತ್ತು. ಹಂಜ ರಸ್ತೆ ಅಭಿವೃದ್ಧಿ ಪಡಿಸಲು ಆ ಭಾಗದ ಜನರು ಶಾಸಕರಿಗೂ ಹಾಗೂ ಗ್ರಾಮ ಪಂಚಾಯತ್  ಮತ್ತು ಜಿಲ್ಲಾಧಿಕಾರಿಗಳಿಗೂ  ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಕುಂದಾಪುರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಹಿಂದೆ ಶಾಸಕರ ನಿಧಿಯಿಂದ ಅನುದಾನ ವನ್ನು ಕಾಯ್ದಿರಿಸಿದ್ದರು ಸಹ ಅರಣ್ಯ ಇಲಾಖೆ ಅನುಮತಿ ದೊರಕದೆ ಅಭಿವೃದ್ಧಿಪಡಿಸಲು ಸಾಧ್ಯವಾಗಿರುವುದಿಲ್ಲ. ಮತ್ತೆ ಪುನಃ ಶಾಸಕರು 25 26 ನೇ ಸಾಲಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಉದ್ದೇಶಕ್ಕಾಗಿ ಅನುದಾನ ಕಾಯ್ದಿರಿಸಲಾಗಿದ್ದು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ.

ಪ್ರಸ್ತುತ  ಅರಣ್ಯ ಇಲಾಖೆ ಪಡೆಯುವ ಕಾರ್ಯ ಚಾಲನೆಯಲ್ಲಿದ್ದು ಅನುಮತಿ ಪಡೆಯುವ ಬಗ್ಗೆ ಸಾಧಕ ಬಾಧಕಗಳ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಕುಂದಾಪುರದ ಶಾಸಕರ ಕಛೇರಿಯಲ್ಲಿ ಸಭೆ ನಡೆಸಿ ಜರೂರು ಅನುಮತಿ ಪಡೆಯುವ ಬಗ್ಗೆ ಸೂಚನೆ ನೀಡಿದರು.

ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದ ಹಂಜ ರಸ್ತೆಯ ಅಭಿವೃದ್ಧಿಗೆ ಶಾಸಕರಿಂದ. ಚಾಲನೆ ದೊರಕಿದ್ದು ಆ ಭಾಗದ ಸಾರ್ವಜನಿಕರು ಶಾಸಕರ ಕಾರ್ಯವೈಕರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹಾಬಲ ನಾಯಕ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles