ಉಡುಪಿ : ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ), ಉಡುಪಿ ಜಿಲ್ಲೆ ಇವರ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆಯ “ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರದ ಸಂಸ್ಥಾಪಕ ಡಾ.ರಾಘವೇಂದ್ರ ಉಳ್ಳೂರ ರವರ ಭಾರತೀಯ ಸಂಸ್ಕೃತಿ, ಜೀವ ವೈವಿಧ್ಯ, ಪ್ರಕ್ರತಿ ದತ್ತ ಔಷಧಿಗಳ ಬಳಕೆ ಹಾಗೂ ಆಧ್ಯಾತ್ಮಿಕ ಸಾಧನೆಗಳನ್ನು ಗುರುತಿಸಿ ಸನ್ಮಾನ ನಡೆಯಿತು.

ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ, ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ವೈದ್ಯ ಅನಗಾಳು ಕೃಷ್ಣಮೂರ್ತಿ, ಉಪ ಕಾರ್ಯದರ್ಶಿಗಳಾದ ಕುಮಾರಿ ಉಮಾದೇವಿ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಹರೀಶ ಸಾಮಗ, 69 ಬಾರಿ ರಕ್ತದಾನ ಮಾಡಿರುವ ಸಾಲಿಗ್ರಾಮದ ಶ್ರೀನಿವಾಸ ಮಯ್ಯ, ಮತ್ತು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ನಾಟಿ ವೈದ್ಯರುಗಳು ಭಾಗಿಯಾಗಿದ್ದರು.


