Wednesday, March 4, 2026

spot_img

ನ್ಯಾಯಾಂಗ ನಿಂದನೆ ಆರೋಪ: ನ್ಯಾಯವಾದಿ ಬಂಧನಕ್ಕೆ ಸೂಚಿಸಿದ ನ್ಯಾಯಾಧೀಶ..?!

ಉಡುಪಿ : ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ನಿಂದಿಸಿದ ಆರೋಪದಡಿ ವಕೀಲನನ್ನು ತಕ್ಷಣ ಬಂಧಿಸುವಂತೆ ನ್ಯಾಯಾಧೀಶರು ಸೂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನ್ಯಾಯಾಲಯದಲ್ಲಿ ನಡೆದ ಈ ಘಟನೆಯಲ್ಲಿ ಮಹಮ್ಮದ್ ಇಕ್ಬಾಲ್ ನ್ಯಾಯಾಂಗ ನಿಂದನೆ ಮಾಡಿದ ಆರೋಪ ಹೊತ್ತ ನ್ಯಾಯವಾದಿ. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾರಕಾಸ್ತ್ರ ದಾಳಿಯ ಪ್ರಕರಣ ವಿಚಾರಣೆ ನಡೆದು ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅಬ್ದುಲ್ ರಾಕಿಬ್ ಅಸ್ಸಾದಿ ಮೇಲೆ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಗು ರೌಡಿ ಶೀಟರ್ ಇದ್ದ ಕಾರಣ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ಹೀಗಾಗಿ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ, ಹಿರಿಯ ಸಹಾಯಕ ಸರಕಾರಿ ಅಭಿಯೋಜಕರ ವಾದಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಆರೋಪಿ ಪರ ನ್ಯಾಯವಾದಿ ಮಹಮ್ಮದ್ ಇಕ್ಬಾಲ್ ಮೇಲೆ ನ್ಯಾಯವಾದಿ ಗರಂ ಆಗಿ ಬಂಧಿಸುವಂತೆ ಆದೇಶಿಸಿದ್ದಾರೆ. ಬಳಿಕ ಕ್ಷಮೆ ಕೇಳಿದ ಆರೋಪಿ ಪರ ನ್ಯಾಯವಾದಿ, ಬಂಧನ ಭೀತಿಯಿಂದ ನ್ಯಾಯಲಯಕ್ಕೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದಾರೆ. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles