ಉಡುಪಿ : ಕೇಂದ್ರಿಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿಟಿ ವಾಹನಸ ಚಾಲಕನಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ನಡೆದಿದೆ. ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ (65) ಮೃತ ಟಿಟಿ ವಾಹನ ಚಾಲಕ. ಮಣಿಪಾಲ ಪ್ರಗತಿನಗರದ ಕೇಂದ್ರೀಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ.

ಮಾರುಥಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಕಂಡು, ವಾಹನ ನಿಲ್ಲಿಸಿದ ಚಾಲಕ, ಎದೆನೋವಿನ ವಿಚಾರವನ್ನು ಒಳಕಾಡು ಅವರಲ್ಲಿ ಹೇಳಿಕೊಂಡಿದ್ದಾನೆ. ತಕ್ಷಣ ಒಳಕಾಡು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರಿಂದ ಚಾಲಕ ಮೃತಪಟ್ಟಿರುವುದು ತಿಳಿದುಬಂದಿದೆ. ಚಾಲಕ ಹೃದಯಾಘಾತದ ಶೂಚನೆ ಸಿಕ್ಕ ತಕ್ಷಣ ನೆರವು ಪಡೆಯದೆ ಹೋಗಿದ್ದರೆ, ವಿದ್ಯಾರ್ಥಿಗಳಿರುವ ಶಾಲಾವಾಹನ ಚಲಾಯಿಸುವಾಗಲೇ ಮೃತಪಟ್ಟು ದೊಡ್ಡ ದುರಂತ ನಡೆಯುವ ಸಾಧ್ಯತೆ ಇತ್ತು.


