ಕುಂದಾಪುರ : ಕೋಟೇಶ್ವರ ಕಾಳಾವರ ಜಂಕ್ಷನ್ ಬಳಿ ಬೀಡಾಡಿ ದನವನ್ನು ಅಪಹರಿಸಿಕೊಂಡ ಹೋದ ನಾಲ್ವರು ಆರೋಪಿಗಳನ್ನು ಪೊಲೀಸ್ ರು ಬಂಧಿಸಿದ್ದಾರೆ. ಗುಲ್ವಾಡಿ ಅಬೂಬಕರ್(39), ಮಹಮ್ಮದ್ ರಫೀಕ್(36), ಯಾಕೂಬಾ(24), ಸುನಿಲ್ (33) ಬಂಧಿತ ಆರೋಪಿಗಳು.

ಜುಲೈ 28ರಂದು ಕಾಳಾವರ ಜಂಕ್ಷನ್ ನಲ್ಲಿರುವ ಅಭಿಮಾನ ಬಾರ್ ಬಳಿಯ ನಂದಿಕೇಶ್ವರ ಬೇಕರಿಯ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳರ ಕೃತ್ಯ ಕಂಡು ಬಂದಿದೆ. ಬೇಕರಿ ಪಕ್ಕದಲ್ಲಿ ಮಲಗಿದ್ದ ದನವನ್ನು ಮುಂಜಾನೆ 5 ಗಂಟೆ ಸುಮಾರಿಗೆ ಇಬ್ಬರು ಮೇವು ನೀಡಿ ಮಾಂಸ ಮಾಡುವ ಉದ್ದೇಶಕ್ಕೆ ವಾಹನದಲ್ಲಿ ಕಳವು ಮಾಡಿದ್ದರು. ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತಂಡ ರಚಿಸಿ ತನಿಖೆಗೆ ಇಳಿದ ಪೊಲೀಸ್ ರು ಆರೋಪಿಗಳನ್ನು ಬಂಧಿಸಿದ್ದಾರೆ.ಕೃತ್ಯಕ್ಕೆ ಬಳಸಿದ್ದ ಬೊಲೇರೋ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.


