Thursday, October 23, 2025

spot_img

ಕೇಕ್ ಕತ್ತರಿಸಿ ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ…

ಉಡುಪಿ : ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ನೇತೃತ್ವದಲ್ಲಿ ಮಣಿಪಾಲದ ಇಂದಿರಾ ಕ್ಯಾಂಟಿನ್ ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಉಪಹಾರ ಸೇವಿಸುವುದರ ಮೂಲಕ ವಿಶಿಷ್ಠವಾಗಿ ಆಚರಿಸಲಾಯಿತು.


ಕೆಪಿಸಿಸಿ ಉಪಾಧ್ಯಕ್ಷರಾದ ಎಮ್ ಎ ಗಫೂರ್ ಮಾತನಾಡಿ ರಾಹುಲ್ ಗಾಂಧಿಯವರು ಸದಾ ಸತ್ಯವನ್ನು ಮಾತನಾಡಿ ಸುಳ್ಳಿನ ವಿರುದ್ದ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸದಾ ತಮ್ಮ ಕಾಳಜಿ ವ್ಯಕ್ತಪಡಿಸುವುದರೊಂದಿಗೆ ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಿಕೊಂಡು ಬಂದಿರುತ್ತಾರೆ. ಕಾಲ್ನಡಿಗೆ ಮೂಲಕ ದೇಶದಾದ್ಯಂತ ಸಂಚಾರ ಮಾಡಿ ದ್ವೇಷವನ್ನು ಅಳಿಸಿ ಪ್ರೀತಿಯ ಸಂದೇಶವನ್ನು ಪ್ರಚಾರ ಮಾಡುವು ಬಹುದೊಡ್ಡ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಚುಕ್ಕಾಣಿಯನ್ನು ಹಿಡಿಯಲಿ ಎಂಬ ಹಾರೈಕೆ ಪ್ರತಿಯೊಬ್ಬ ನಾಗರಿಕನೂ ಕೂಡ ಬಯಸುತ್ತಿದ್ದಾರೆ ಎಂದರು.

ಇಂದು ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ನಾವು ಇಂದಿರಾಜಿಯವರ ಮೊಮ್ಮಗನ ಹುಟ್ಟುಹಬ್ಬವನ್ನು ಇಂದಿರಾ ಕ್ಯಾಂಟಿನ್ ನಲ್ಲಿ ಆಚರಿಸುತ್ತಿದ್ದು ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಡವರ ಹಸಿವನ್ನು ನೀಗಿಸಲು ಇವುಗಳನ್ನು ಆರಂಭಿಸಿದ್ದರು. ಮಣಿಪಾಲದ ಈ ಕ್ಯಾಂಟಿನ್ ನಲ್ಲಿ ಪ್ರತಿ ದಿನ ಬೆಳಿಗ್ಗೆ ಸುಮಾರು 350 ಮಂದಿ ಬೆಳಗ್ಗಿನ ಉಪಹಾರ ಮತ್ತು 400 ಮಂದಿ ಮಧ್ಯಾನ್ಹದ ಊಟವನ್ನು ಸೇವಿಸುತ್ತಿದ್ದಾರೆ. ಇಂತಹ ಉತ್ತಮ ಯೋಜನೆಗೆ ಇನ್ನಷ್ಟು ಪ್ರಚಾರ ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿಯ ರಿಕ್ಷಾ ಚಾಲಕರೊಂದಿಗೆ ಸೇರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿಯವರು ಇಡೀ ದೇಶವನ್ನು ಸಂಚಾರ ಮಾಡುವ ಮೂಲಕ ಜನರಿಗೆ ಅತೀ ಹೆಚ್ಚು ಹತ್ತಿರವಾಗುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರು ದೇಶದ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಹಾರೈಕೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ಹೇಳಿದರು.


ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ, ಮೀನುಗಾರ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಮುಖಂಡರಾದ ಮುರಳಿ ಶೆಟ್ಟಿ, ಅಮೃತ್ ಶೆಣೈ, ಸುಕೇಶ್ ಆಚಾರ್ಯ, ಹಮ್ಮದ್, ನವೀನ್ ಸಾಲಿಯಾನ್, ಯಾದವ ಅಮೀನ್, ಸದಾನಂದ ಮೂಲ್ಯ ಸತೀಶ್ ಕೊಡವೂರು, ರಮೇಶ್ ತಿಂಗಳಾಯ, ರಾಮಪ್ಪ ಸಾಲಿಯಾನ್, ರೋಶನ್ ಶೆಟ್ಟಿ, ಪ್ರದೀಪ್ ಸ್ಯಾಮುವೆಲ್, ಅಬುಬಕ್ಕರ್ ಖಾಸಿಂ, ರಹೀಮ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles