Sunday, June 29, 2025

spot_img

ಕತಾರ್ ನಲ್ಲಿ “ತುಳು ಜಾತ್ರೆ”

ಕತಾರ್ : “ತುಳು ಕೂಟ ಕತಾರ್” ಆಶ್ರಯದಲ್ಲಿ  “ತುಳು ಜಾತ್ರೆ” “ಐಡಿಯಲ್ ಇಂಡಿಯನ್ ಸ್ಕೂಲ್”, ಕತಾರ್ ನ ರಂಗವೇದಿಕೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ತುಳುವರ ಪಾರಂಪರಿಕ ಪರಿಕಲ್ಪನೆ “ತುಳು ಜಾತ್ರೆ” ಯ ಅಂಗವಾಗಿ ನೃತ್ಯ,ಯಕ್ಷಗಾನ,ಪ್ರತಿಭಾ ಪುರಸ್ಕಾರ, ಜಾನಪದ ಆಟಗಳು ಮತ್ತು ವಿವಿಧ ತುಳು ನಾಡಿನ ತಿನಿಸುಗಳ ಪ್ರದರ್ಶನಗೊಂಡಿತು. ಸಾವಿರಾರು ಜನರು ಭಾಗವಹಿಸಿ ತಮ್ಮ ಊರಿನ ಜಾತ್ರೆಯ ಆನಂದವನ್ನು ಕತಾರ್ ನ ಮಣ್ಣಿನಲ್ಲಿ ಅನುಭವಿಸಿದರು.  
ಬಿಲ್ಲವಾಸ್ ಕತಾರ್ ನ ಅವಿಭಾಜ್ಯ ಅಂಗವಾದ “ಅಮ್ಮನ ತಮ್ಮನ” ತಂಡದವರು ವಿಶೇಷವಾದ ಆಕರ್ಷಣೆಯೊಂದಿಗೆ ಎಲ್ಲರಿಗಿಂತ  ವಿಭಿನ್ನವಾಗಿ ತಮ್ಮ ತಿನಿಸಂಗಡಿಯನ್ನು ಅಲಂಕಾರ ಮಾಡಿದ್ದು ಹಾಗೂ ವಿಶೇಷವಾಗಿ ಮನೆಯಲ್ಲಿ ಸಿದ್ದಪಡಿಸಿದ ಅಡುಗೆ ಜನಾಕರ್ಷಣೆಗೆ ಕಾರಣವಾಯಿತು. ತುಳು ಜಾತ್ರೆಯಲ್ಲಿ ಪ್ರತೀ ಭಾರಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುವ “ಅಮ್ಮನ ತಮ್ಮನ” ತಂಡದ ಇದು ಮೂರನೆಯ ವರ್ಷದ ಪ್ರದರ್ಶನವಾಗಿದೆ ಎನ್ನುವುದು ಉಲ್ಲೇಖನೀಯ. ಈ ಭಾರಿಯ ರುಚಿ ರುಚಿ ಅಡುಗೆ ಮತ್ತು ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ತುಳು ಕೂಟ ಕತಾರ್, “ಅಮ್ಮನ ತಮ್ಮನ” ತಂಡದವರನ್ನು ಅತ್ಯುತ್ತಮ ತಂಡವೆಂದು ಘೋಷಿಸಿ ಪ್ರಶಸ್ತಿ ನೀಡಿ ಗೌರವಿಸಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles