ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಬಾಯಿಯಲ್ಲಿ ತೀವ್ರ ಹುಣ್ಣಾಗಿ, ಅನ್ನ ಆಹಾರ ಸೇವಿಸಲಾಗದ ವ್ಯಕ್ತಿಯನ್ನು ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ವ್ಯಕ್ತಿ ವಿಶ್ವನಾಥ (52) ಮೂಲತಃ ಮಹಾರಾಷ್ಟ್ರ ಮೂಲದವರು, ಉಡುಪಿ ಕಡಂದಲೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ. ಕಾಯಿಲೆ ಉಲ್ಬಣಗೊಂಡಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.


