Saturday, November 7, 2026

spot_img

ವಿಗ್ರಹ ಕಳವು ಆರೋಪ ಸತ್ಯಕ್ಕೆ ದೂರ: ಬಾಳೆಕುದ್ರು ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ

ಉಡುಪಿ: ಬಾಳೆಕುದ್ರು ಶ್ರೀಮಠದ ಹಳೆಯ ವಿಗ್ರಹಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿರುವುದಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿವೆ ಎಂದು ಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ಮಧ್ಯಸ್ಥ ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 4ರಂದು ಕೆಲವು ಹಳೆಯ ಶಿಷ್ಯವರ್ಗದವರು ಎಂದು ಹೇಳಿಕೊಂಡವರು, ಪರಮಪೂಜ್ಯ ಶ್ರೀ ಶ್ರೀ ವಾಸುದೇವ ಸದಾಶಿವ ಶಿವಸ್ವಾಮಿಗಳು, ಆಡಳಿತಾಧಿಕಾರಿ ಎ. ಅನಿಲ್ ಕುಮಾರ್, ಸಿಬ್ಬಂದಿ ಜಯಲಕ್ಷ್ಮಿ ಹಾಗೂ ಪುರೋಹಿತ ಶ್ರೇಯಸ್ ಸೇರಿದಂತೆ ನಾಲ್ವರು ಮಠದ ಹಳೆಯ ವಿಗ್ರಹಗಳನ್ನು ಬೆಂಗಳೂರಿನ ಪ್ರತಿಷ್ಠಿತ ‘ಪ್ರಸಿದ್ಧಿ ಐಡಲ್ಸ್’ ಸಂಸ್ಥೆಗೆ ಕಳವು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಗಳು ಸಂಪೂರ್ಣ ಸುಳ್ಳು ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಕಾನೂನು ಪ್ರಕ್ರಿಯೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ. ಆದರೆ, ಸ್ವಾಮೀಜಿಯವರು ಮಠ ಬಿಟ್ಟು ಓಡಿಹೋಗಿದ್ದಾರೆ, ಸಿಬ್ಬಂದಿ ವರ್ಗವೂ ಮಠದಿಂದ ತೆರಳಿದೆ ಹಾಗೂ ಮಠಕ್ಕೆ ಬೀಗ ಹಾಕಲಾಗಿದೆ ಎಂಬ ಆರೋಪಗಳು ಕೆಲವರಿಂದ ಹರಿದಾಡುತ್ತಿವೆ. ಇವುಗಳಲ್ಲಿಯೂ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮಠದಲ್ಲಿ ನಿತ್ಯದ ಪೂಜಾ ಕೈಂಕರ್ಯಗಳಿಗೆ ಯಾವುದೇ ಚ್ಯುತಿ ಉಂಟಾಗದಂತೆ ಪುರೋಹಿತರನ್ನು ನಿಯೋಜಿಸಲಾಗಿದ್ದು, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಠದ ಎಲ್ಲಾ ವಿಗ್ರಹಗಳು ಪರಮಪೂಜ್ಯ ಸ್ವಾಮೀಜಿಯವರ ಬಳಿ ಸುರಕ್ಷಿತವಾಗಿವೆ. ತಾವು ಯಾವುದೇ ಅನಾಚಾರ ಅಥವಾ ಅಪಚಾರ ಎಸಗಿಲ್ಲ ಎಂದು ತಿಳಿಸಿದ್ದಾರೆ.

ಕಾನೂನು ತಜ್ಞರನ್ನು ಭೇಟಿಯಾಗಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಸದ್ಭಕ್ತರ ಮುಂದೆ ಸತ್ಯಾಂಶಗಳನ್ನು ವಿವರಿಸುವುದಾಗಿ ಹೇಳಿರುವ ಅವರು, ಅಲ್ಲಿಯವರೆಗೆ ಭಕ್ತರು ಹಾಗೂ ಸಾರ್ವಜನಿಕರು ಆತುರದ ನಿರ್ಧಾರಕ್ಕೆ ಬರದೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles