ಉಡುಪಿ : ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆ ನಿವಾಸಿ ಸೌಂದರ್ಯ ಹೆಚ್.ಎ. (20) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 30ರಂದು ಕಾಲೇಜಿನ ಸ್ನೇಹಿತರೊಂದಿಗೆ ಕೊಡಗು ಪ್ರವಾಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ಸೌಂದರ್ಯ, ಪ್ರವಾಸಕ್ಕೂ ತೆರಳದೆ ಮನೆಗೂ ಮರಳದೇ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಯುವತಿ ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ.

ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ (ದೂ.ಸಂ: 0820-2520444), ಉಡುಪಿ ಕಂಟ್ರೋಲ್ ರೂಂ (0820-2526444), ಪೊಲೀಸ್ ನಿರೀಕ್ಷಕರು (ಮೊ. 9480805408) ಅಥವಾ ಪೊಲೀಸ್ ಉಪನಿರೀಕ್ಷಕರು (ಮೊ. 9080805445) ಅವರನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.



