Monday, August 31, 2026

spot_img

ವಿವೇಕ ಶಿಕ್ಷಣ ಸಂಸ್ಥೆಗಳ ಇಂಟರಾಕ್ಟ್ ಕ್ಲಬ್‌ಗಳ ಪದಗ್ರಹಣ ಸಮಾರಂಭ ಯಶಸ್ವಿ

ಉಡುಪಿ : ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಶಿಕ್ಷಣ ಸಂಸ್ಥೆಗಳ ನಾಲ್ಕು ಇಂಟರಾಕ್ಟ್ ಕ್ಲಬ್‌ಗಳ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು. ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಅಧ್ಯಕ್ಷ ಮಿಲ್ಟನ್ ಅಲ್ಮೇಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಕಾರ್ಯದರ್ಶಿ ಕರುಣಾಕರ್ ಕುಂದರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವೇಕ ಹೈಸ್ಕೂಲ್, ವಿವೇಕ ಪದವಿ ಪೂರ್ವ ಕಾಲೇಜು, ವಿವೇಕ ಬಾಲಿಕಾ ಪ್ರೌಢಶಾಲೆ ಹಾಗೂ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಇಂಟರಾಕ್ಟ್ ಕ್ಲಬ್‌ಗಳ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಇಂಟರಾಕ್ಟ್ ಸಭಾಪತಿ ಗಣೇಶ್ ಶೆಟ್ಟಿ ಮಳವಳ್ಳಿ ನಡೆಸಿಕೊಟ್ಟರು. ಆರಂಭದಲ್ಲಿ ಶಾಲೆಯ ಪ್ರಾಂಶುಪಾಲ ಜಗದೀಶ್ ನಾವಡ ಅವರು ಅತಿಥಿಗಳನ್ನು ಸ್ವಾಗತಿಸಿ ಇಂಟರಾಕ್ಟ್ ಕ್ಲಬ್‌ಗಳ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ಹೇಳಿದರು.

ಗಣೇಶ್ ಶೆಟ್ಟಿ ಮಳವಳ್ಳಿ ಅವರು ಇಂಟರಾಕ್ಟ್ ಕ್ಲಬ್‌ಗಳ ಉದ್ದೇಶ, ಮಹತ್ವ, ಸಮಾಜಮುಖಿ ಸೇವಾ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ನಾಯಕತ್ವದ ಅವಕಾಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಇಂಟರಾಕ್ಟ್ ಸಭಾಪತಿ ಕುಸುಮ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಜಿಲ್ಲಾ DIR ಸೃಷ್ಟಿ ಮಾತನಾಡಿ, ಇಂಟರಾಕ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ದೊರೆಯುವ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಯ ವಿವಿಧ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು.

ವಿವೇಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರೇಮಾನಂದ, ವೆಂಕಟೇಶ್ ಉಡುಪ ಹಾಗೂ ಶ್ರೀಮತಿ ಪ್ರೀತಿ ರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಇಂಟರಾಕ್ಟ್ ಸಂಚಾಲಕರಾದ ಕೃಷ್ಣ, ನರೇಂದ್ರ ಕುಮಾರ್, ಶ್ರೀಮತಿ ವಿನುತ ಹಾಗೂ ಶ್ರೀಮತಿ ಅಶ್ವಿನಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದರು. ಸಮಾರಂಭದಲ್ಲಿ ನಾಲ್ಕು ಇಂಟರಾಕ್ಟ್ ಕ್ಲಬ್‌ಗಳ ನೂತನ ಅಧ್ಯಕ್ಷರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸೇವಾ ಕಾರ್ಯಗಳನ್ನು ಉತ್ಸಾಹದಿಂದ ಕೈಗೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಸಂದೇಶವನ್ನು ಸಾರಿದ ಈ ಪದಗ್ರಹಣ ಸಮಾರಂಭವು ಸ್ಮರಣೀಯವಾಗಿ ನೆರವೇರಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles