Monday, May 11, 2026

spot_img

ಮೂಳೂರಿನಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ: ಬೃಹತ್ ಪ್ರತಿಭಟನೆ.

ಉಡುಪಿ : ಮೂಳೂರು ಗ್ರಾಮದಲ್ಲಿ ಕಾಪು ಪುರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣವನ್ನು ವಿರೋಧಿಸಿ ಎಸ್‌ಟಿಪಿ ನಿರ್ಮಾಣ ವಿರೋಧ ಸಮಿತಿ, ಮೂಳೂರು ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ ಅಗತ್ಯವಿದ್ದರೂ, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂಬಂಧಿತ ಸಮಸ್ಯೆಗಳನ್ನೂ ಪರಿಗಣಿಸಿ, ಘಟಕವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದು ಅಥವಾ ಪರ್ಯಾಯ ಜಾಗವನ್ನು ತಕ್ಷಣ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮೂಳೂರು ಎಸ್‌ಟಿಪಿ ನಿರ್ಮಾಣ ವಿರೋಧ ಸಮಿತಿಯ ಸದಸ್ಯರೊಂದಿಗೆ ಶಾಸಕರು ಕಾಪು ತಹಶೀಲ್ದಾರ್ ಅನಂತ ಶಂಕರ್ ಹಾಗೂ ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಅವರಿಗೆ ಮನವಿ ಸಲ್ಲಿಸಿ, ಮೂಳೂರು ಪರಿಸರದಲ್ಲಿ ಎಸ್‌ಟಿಪಿ ನಿರ್ಮಿಸದಂತೆ ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles