Tuesday, September 29, 2026

spot_img

ಎಲ್ಲರನ್ನು ಒಗ್ಗೂಡಿಸುವ ಭಾಷೆ ಹಿಂದಿ: ಡಾ. ದಯಾನಂದ ಬಾಯಾರ್

ಉಡುಪಿ : ಹಿಂದಿ ಪ್ರಾಚೀನ ಭಾಷೆಯಾಗಿದ್ದು, ಹಲವು ಉತ್ತಮ ಸಾಹಿತ್ಯ ಪ್ರಕಾರಗಳು ಈ ಭಾಷೆಯಲ್ಲಿ ರಚನೆಯಾಗಿವೆ. ಭಾವೈಕ್ಯತೆಯನ್ನು ಬೆಳೆಸುವ ಶಕ್ತಿಯಿರುವ ಹಿಂದಿ ಭಾಷೆ ವಿವಿಧ ವರ್ಗದ ಜನರನ್ನು ಒಗ್ಗೂಡಿಸುವ ಸೇತುವೆಯಾಗಿದೆ ಎಂದು ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್. ಬಾಯಾರ್ ಹೇಳಿದರು.

ಉಡುಪಿಯ ಮಹಾತ್ಮ ಗಾಂಧೀ ಮೆಮೋರಿಯಲ್ ಸಂಧ್ಯಾ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹಿಂದಿ ದಿವಸ್ ಅಂಗವಾಗಿ ಕಾಲೇಜಿನಲ್ಲಿ ಆಶುಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 50ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ‘ಡಿಜಿಟಲ್ ಯುಗ್ ಮೇ ಹಿಂದಿ’ ವಿಷಯದ ಭಿತ್ತಿಪತ್ರ ಪ್ರದರ್ಶನ ಹಾಗೂ ರಂಗೋಲಿಗಳ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ದೇವಿದಾಸ್ ಎಸ್. ನಾಯ್ಕ್ ಮಾತನಾಡಿದರು. ಹಿಂದಿ ಉಪನ್ಯಾಸಕಿ ಕೃತ್ತಿಕಾ ಪಿ. ಶೆಣೈ ಅವರು ಹಿಂದಿ ದಿವಸ್ ಆಚರಣೆಯ ಔಚಿತ್ಯ ಹಾಗೂ ಹಿಂದಿ ಭಾಷೆಯ ಹಿರಿಮೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೋರ್ವ ಹಿಂದಿ ಉಪನ್ಯಾಸಕಿ ಸುನೀತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಿತಾಲಿ ವಿನಾಯಕ್ ಪೈ ಅತಿಥಿ ಪರಿಚಯ ಮಾಡಿದರು. ಯಥಾರ್ಥ್ ಸುವರ್ಣ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಅನ್ಸು ಕುಮಾರಿ ಧನ್ಯವಾದ ಸಮರ್ಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles