ಹೆಬ್ರಿ : ಹೆಬ್ರಿ ಇಲ್ಲಿನ ಮುದ್ರಾಡಿಯ ಗಣಪತಿ ದೇವಸ್ಥಾನದ ಎದುರು ರಸ್ತೆಯ ಪಕ್ಕದಲ್ಲಿ ನಿಲ್ಸ್ ಕಲ್ ಸಮಾಧಿ ಇರುವುದನ್ನು ಕ್ಷೇತ್ರ ಪರಿವೀಕ್ಷಣ ಆಸಕ್ತಿ ಹೊಂದಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು ಪತ್ತೆ ಹಚ್ಚಿದ್ದಾರೆ. ಅವರು ಶುಭ ಕಾರ್ಯಕ್ರಮದ ನಿಮಿತ್ತ ಮುದ್ರಾಡಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ. ಅಲ್ಲಿ ಕ್ಷೇತ್ರವನ್ನು ವೀಕ್ಷಿಸುತ್ತಿರುವಾಗ ನಿಲ್ಸ್ ಕಲ್ ಗುಹಾ ಸಮಾಧಿ ಇರುವುದು ಪತ್ತೆಯಾಗಿದೆ. ತಕ್ಷಣ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿರುವ ಸಂಶೋಧಕರಾದ ಪ್ರೊಫೆಸರ್ ಟಿ. ಮುರುಗೇಶಿಯವರಿಗೆ ಮಾಹಿತಿ ನೀಡಿದಾಗ. ಇದೊಂದು ನಿಲ್ಸ್ ಕಲ್ ಸಮಾಧಿ ಆಗಿರುತ್ತದೆ ತಿಳಿಸಿದ್ದಾರೆ. ಪಕ್ಕದಲ್ಲಿ ಎರಡು ಬಾವಿಗಳಿಗೆ. ಹಾಗೂ ಎದುರಿನಲ್ಲಿ ನಾಗಬನ ಇದೆ. ಈ ನಿಲ್ಸ್ ಕಲ್ಸು ಸುಮಾರು ಮೂರು ಫೀಟು. ನೆಲದಿಂದ ಎತ್ತರವಿದ್ದು. ಒಂದುವರೆ ಫೀಟ್ ದಪ್ಪ ಇದೆ. ಸುಮಾರು 2000 ದಿಂದ 2,500 ವರ್ಷ ಹಳೆಯದಾಗಿರ ಬಹುದು ಎಂದು ಅಂದಾಜಿಸಲಾಗಿದೆ ಈ ಸಂದರ್ಭದಲ್ಲಿ ಪರ್ಕಳದ ಮೋಹನ್ ದಾಸ್ ನಾಯಕ್, ಗಣೇಶ್ ರಾಜ್ ಸರಳಬೆಟ್ಟು ಹಾಗೂ ನಾಗರಾಜ್ ನಾಯಕ್ ಜೊತೆಗಿದ್ದು ಸಹಕರಿಸಿದರು.