ಉಡುಪಿ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಹೆಜಮಾಡಿಯ ವಿದ್ಯಾ ಪ್ರಸಾರ ಶಾಲೆಯಲ್ಲಿ ಎಲ್ ಕೆಜಿ ವಿದ್ಯಾರ್ಥಿನಿಯಾಗಿದ್ದ ಫಾತಿಮಾ ಮಾಹಿರಾ ಮೃತ ಬಾಲಕಿ, ಹೆಜಮಾಡಿ ಎನ್.ಎಸ್. ರೋಡ್ ಬೇಂಗಲೆಯ ಕಲಂದರ್ ಹಾಗು ಮುಮ್ತಾಜ್ ದಂಪತಿಯ ಪುತ್ರಿ.ಬ ಫಾತಿಮಾ ಮಾಹಿರಾ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ,


