Thursday, March 26, 2026

spot_img

ಹಿಂದೂಗಳೆಲ್ಲರೂ ಸೋದರ ಸಮಾನರು, ಭೀಮ ಸಂಗಮ ಕಾರ್ಯಕ್ರಮದಲ್ಲಿ ಗಂಟಿಹೊಳೆ ಸಂದೇಶ

ಬೈಂದೂರು:

ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ಬಿಜೆಪಿ ಕರ್ನಾಟಕ ನಡೆಸುತ್ತಿರುವ ನಡೆಯುತ್ತಿರುವ ಭೀಮ ಸಂಗಮ ಕಾರ್ಯಕ್ರಮವು ದಿನಾಂಕ 27.01.2025 ರಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ನಿವಾಸದಲ್ಲಿ ನಡೆಯಿತು. ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಸಮಾಜದ ಪ್ರಮುಖರ ಹಾಗೂ ಉಪೇಕ್ಷಿತ ಬಂಧುಗಳ ಸಮ್ಮುಖದಲ್ಲಿ ಆಯೋಜಿಸಲಾದ ಭೀಮ ಸಂಗಮ ಕಾರ್ಯಕ್ರಮದಲ್ಲಿ ದೇಶಕ್ಕೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಶಾಸಕರು ಅಂಬೇಡ್ಕರ್‌ ಹಾದಿಯಲ್ಲಿ ನಡೆದು ದೇಶಸೇವೆ ಮಾಡೋಣ ಎಂದು ನೆರೆದಿದ್ದವರಲ್ಲಿ ಭಿನ್ನವಿಸಿದರು. ಕಾರ್ಯಕ್ರಮದಲ್ಲಿ ದಲಿತ ಬಂಧುಗಳಿಗೆ ಭಾರತ ಮಾತೆಯ ಭಾವಚಿತ್ರ ನೀಡಿ ಗೌರವಿಸಿ, ಅವರೊಂದಿಗೆ ಸಹಭೋಜನ ಸ್ವೀಕರಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ” ನ ಹಿಂದೂ ಪತಿತೋ ಭವೇತ್, ಹಿಂದವಃ ಸೋದರಾಃ ಸರ್ವೇ”, ತಾರತಮ್ಯದಲ್ಲಿ ಬಿಜೆಪಿ ಎಂದಿಗೂ ವಿಶ್ವಾಸ ಇರಿಸಿಕೊಂಡಿಲ್ಲ, ಪಕ್ಷದ ತತ್ವ ಸಿದ್ಧಾಂತಗಳು ಸಹಬಾಳ್ವೆಯ ಚಿಂತನೆಯನ್ನು ಮಾತ್ರ ಪ್ರೋತ್ಸಾಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘಚಾಲಕರಾದ ಸತೀಶ್ ಕಾಳಾವರ್ಕರ್, ಪ್ರಮುಖರಾದ ಸುನೀಲ್ ಕುಲಕರ್ಣಿ ಮಂಗಳೂರು, ಅಶೋಕ್‌ ಪಡುಕೋಣೆ, ಶಾಸಕರ ಕುಟುಂಬದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles