Thursday, March 5, 2026

spot_img

ಸೆಪ್ಟೆಂಬರ್‌ 6ರ ಒಳಗಾಗಿ ಪರಶುರಾಮ ಮೂರ್ತಿಯನ್ನು ಪುನರ್‌ ನಿರ್ಮಾಣ ಮಾಡಬೇಕು: ವಿ. ಸುನಿಲ್‌ ಕುಮಾರ್‌

ಉಡುಪಿ : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಸೆಪ್ಟೆಂಬರ್‌ 6ರ ಒಳಗಾಗಿ ಪರಶುರಾಮ ಮೂರ್ತಿಯನ್ನು ಪುನರ್‌ ನಿರ್ಮಾಣ ಮಾಡಬೇಕು. ಒಂದೊಮ್ಮೆ ಪುನರ್‌ ನಿರ್ಮಾಣ ಮಾಡದೇ ಇದ್ರೆ ಕಾರ್ಕಳದ ಅನಂತ ಶಯನದಿಂದ ಬೈಲೂರು ವರೆಗೆ ಬೃಹತ್‌ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಆಕ್ರೋಶ ಹೊರಹಾಕಿದ್ದಾರೆ.

ಅವರು ಕಾರ್ಕಳ ಬಿಜೆಪಿ ಕರೆ ನೀಡಿದ, ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿಯನ್ನು ಆರಂಭಿಸಿ, ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸುವ ಕುರಿತು ಕಾರ್ಕಳದಿಂದ ಉಡುಪಿಯ ವರೆಗೆ ನಡೆದ ವಾಹನ ಜಾಥಾದಲ್ಲಿ ಪಾಲ್ಗೊಂಡು, ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಪರಶುರಾಮ ಮೂರ್ತಿ ಕುರಿತು ಸುಳ್ಳು ಆರೋಪಗಳನ್ನು ಮಾಡಿರುವ ಕಾಂಗ್ರೆಸ್‌ ನಾಯಕರ ಮುಖವಾಡ ಕಳಚಿದೆ. ಸುಳ್ಳು ಹೇಳುವ ಮೂಲಕ ಜನರನ್ನೇ ಧಿಕ್ಕು ತಪ್ಪಿಸಿದ್ದೀರಿ. ಪರಶುರಾಮ ಥೀಮ್‌ ಪಾರ್ಕ್‌ ವಿರುದ್ದ ದಾಖಲಿಸಿರುವ ಕೇಸ್‌ ವಾಪಾಸ್‌ ಪಡೆಯಬೇಕು. ಸಾರ್ವಜನಿಕರಲ್ಲಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರು ಕ್ಷಮೆ ಕೇಳಬೇಕು. ಸುಳ್ಳು ಅಪಪ್ರಚಾರ ಮಾಡಿದವರ ಮೇಲೆ ಕೇಸು ದಾಖಲಿಸಬೇಕು ಎಂದರು.

ಹಿರಿಯ ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್ ವಾಹನ ಜಾಥಾ ಕ್ಕೆ ಚಾಲನೆ ನೀಡಿದರು. ಬಿಜೆಪಿ ಕಾರ್ಯಕರ್ತರು ಜಾಥದುದ್ದಕ್ಕೂ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ವಿರುದ್ಧ ಘೋಷಣೆ ಕೂಗಿದರು.

ಕಾರ್ಕಳ ಸ್ವರಾಜ್ಯ ಮೈದಾನ ಬಳಿಯಿಂದ ಹೊರಟ ವಾಹನ ಜಾಥಾ ಅನಂತಶಯನ, ಗೋಮಾಟಬೆಟ್ಟ, ಆನೆಕೆರೆ, ಕೃಷ್ಣ ಮಂದಿರ ಬೈಪಾಸ್ ಮೂಲಕ ಹಿರಿಯಂಗಡಿ, ಅತ್ತೂರ್ ಕ್ರಾಸ್, ತಾಲೂಕು ಆಫೀಸ್, ಬಂಗ್ಲೆಗುಡ್ಡೆ, ಜೋಡುರಸ್ತೆ ಮುಖಾಂತರ ಬೈಲೂರ್, ಹಿರಿಯಡ್ಕ ದಾರಿಯಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಈ ಸಂದರ್ಭ ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles